ಪರ್ಕಳ: ಪೈಪ್ ಒಡೆದು ಕುಡಿಯುವ ನೀರು ಪೋಲು

ಉಡುಪಿ, ಜು.13: ಪರ್ಕಳದ ಶಿವಂ ಹೋಟೆಲ್ ಬಳಿ ನಗರಸಭೆಯ ಕುಡಿಯುವ ನೀರಿನ ಪೈಪ್ ಹೊಡೆದು ದೊಡ್ಡ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದು ಕಂಡುಬಂದಿದೆ.
ಸ್ವರ್ಣ ನದಿಯಿಂದ ಶುದ್ದಿಕರಿಸಲ್ಪಟ್ಟ ನೀರು ಪೂರೈಕೆ ಆಗುವ ನಗರಸಭೆಯ ಪೈಪು ಒಂದು ತಿಂಗಳ ಹಿಂದೆ ಒಡೆದಿದ್ದು ಕುಡಿಯುವ ನೀರು ಮಳೆ ನೀರಿನಂತೆ ರಸ್ತೆಯಲ್ಲಿ ಹರಿಯುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ನೀರು ಪೋಲಾ ಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೂಡಲೇ ಸಂಬಂಧಪಟ್ಟವರು ಒಡೆದು ಹೋಗಿರುವ ನೀರಿನ ಪೈಪ್‌ನ್ನು ಸರಿಪಡಿಸಿ ಪೋಲಾಗುತ್ತಿರುವ ನೀರನ್ನು ತಡೆಯಬೇಕೆಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಆಗ್ರಹಿಸಿದ್ದಾರೆ.
Next Story





