ಕೋಳಿಅಂಕ: ಮೂವರ ಬಂಧನ

ಗಂಗೊಳ್ಳಿ, ಜು.14: ಗುಜ್ಜಾಡಿ ಗ್ರಾಮದ ಮಂಕಿಯ ದ್ಯಾಸನಮಕ್ಕಿ ಎಂಬಲ್ಲಿ ಜು.13ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ರವೀಂದ್ರ, ಸುಧಾಕರ ಪೂಜಾರಿ ಮತ್ತು ವಿಕ್ರಮ್ ಬಂಧಿತ ಆರೋಪಿಗಳು. ಉಳಿದವರು ಓಡಿ ಹೋಗಿದ್ದಾರೆ. ಬಂಧಿತರಿಂದ 5 ಕೋಳಿ ಹುಂಜ, 5 ಕೋಳಿಬಾಳು, 2200ರೂ. ನಗದು, ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





