ಹೊಳೆಯಲ್ಲಿ ದನದ ರುಂಡ ಪತ್ತೆ: ಪ್ರಕರಣ ದಾಖಲು
ಕಾರ್ಕಳ, ಜು.14: ದುರ್ಗಾ ಗ್ರಾಮದ ಉಳಿರು ಗಣಪತಿ ವರ್ಗ ಎಂಬಲ್ಲಿ ಸ್ವರ್ಣ ಹೊಳೆ ಬದಿ ಭಾಗಶಃ ಕೊಳೆತು ಹೋದ ದನದ ರುಂಡ ಜು.13ರಂದು ಸಂಜೆ ವೇಳೆ ಪತ್ತೆಯಾಗಿದೆ.
ದುಷ್ಕರ್ಮಿಗಳು ದನವನ್ನು ಕೆಲ ದಿನಗಳ ಹಿಂದೆ ಹತ್ಯೆ ಮಾಡಿ, ಅದರ ಮಾಂಸವನ್ನು ತೆಗೆದು, ತಲೆಯನ್ನು ಸ್ವರ್ಣ ಹೊಳೆಯ ನೀರಿಗೆ ಎಸೆದಿರುವ ಸಾಧ್ಯತೆ ಇದ್ದು, ಆ ರುಂಡವು ಹೊಳೆಯ ನೀರಿನಲ್ಲಿ ಕೊಚ್ಚಿಕೊಂಡು ಬಂದು ಉಳಿರು ಗಣಪತಿ ವರ್ಗ ಎಂಬಲ್ಲಿ ಹೊಳೆಯ ದಡದಲ್ಲಿ ಮರದ ತುಂಡಿಗೆ ಅಡ್ಡಲಾಗಿ ಸಿಕ್ಕಿಕೊಂಡಿರು ವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





