ಅಂಗಡಿಗೆ ನುಗ್ಗಿ ಸೊತ್ತು ಕಳವು: ಪ್ರಕರಣ ದಾಖಲು

ಕುಂದಾಪುರ, ಜು.15: ಕುಂದಾಪುರ ಸಂತೆ ಮಾರ್ಕೆಟ್ ಬಳಿಯ ಅಂಗಡಿ ಕೋಣೆಗೆ ಜು.14ರಂದು ನಸುಕಿನ ವೇಳೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕೋಡಿಯ ಮಹಮ್ಮದ್ ಅಬ್ರಾರ್ ಎಂಬವರ ಅಂಗಡಿಯ ಶಟರ್‌ನ ಬಾಗಿಲ ಬೀಗವನ್ನು ಒಡೆದು ಒಳಗೆ ಪ್ರವೇಶಿಸಿದ ಕಳ್ಳರು, 95,000ರೂ. ಮೌಲ್ಯದ ತಾಮ್ರದ ವಯರ್ ಹಾಗೂ ಹಿತ್ತಾಳೆಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





