ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಯಾತ್ರಿ ಸಂಘ ಭೇಟಿ

ಉಡುಪಿ, ಜು.16: ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಶಾಂತಿ ನೇತೃತ್ವದ ಪದಾಧಿಕಾರಿಗಳ ನಿಯೋಗ ಬುಧವಾರ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿತು.
ಬಳಿಕ ನಿಯೋಗವು ಸ್ಟೇಷನ್ ಮಾಸ್ಟರ್ ನಾಗರಾಜ್ ಶೆಟ್ಟಿ ಮತ್ತು ನಿಲ್ದಾಣದ ಸಹಾಯಕ ಉಸ್ತುವಾರಿ ಸತ್ಯನಾರಾಯಣ ಭಟ್ ಅವರ ಜೊತೆ ಸಮಾಲೋಚನೆ ನಡೆಸಿ ನಿಲ್ದಾಣದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಧುಸೂದನ್ ಹೇರೂರು, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕೋಶಾಧಿಕಾರಿ ಅಜಿತ್ ಕುಮಾರ್ ಶೆಣೈ, ನಿರ್ದೇಶಕರಾದ ಸದಾನಂದ ಅಮೀನ್ ಮತ್ತು ಜಾನ್ ರೆಬೆಲ್ಲೊ ಹಾಜರಿದ್ದರು.
Next Story





