ಮಂಗಳೂರು ಪ್ರಸಾದ್ ನೇತ್ರಾಲಯದಲ್ಲಿ ವೈದ್ಯರ ದಿನಾಚರಣೆ

ಉಡುಪಿ, ಜು.16: ವೈದ್ಯರು ಸಮಾಜಕ್ಕೆ ಸಲ್ಲಿಸುವ ಸೇವೆ ಶ್ರೇಷ್ಠವಾದದ್ದು. ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆರೋಗ್ಯವಂತ ಸಮಾಜವನ್ನು ನಿರ್ಮಾಣದಲ್ಲಿ ವೈದ್ಯರ ಸೇವೆ ಅತೀ ಅಮೂಲ್ಯ ವಾದದ್ದು. ವೈದ್ಯರು ತಮ್ಮ ವೃತ್ತಿ ಬದುಕಿನ ಜೊತೆ ತಮ್ಮ ಮಕ್ಕಳು ಮತ್ತು ಕುಟುಂಬಸ್ಥರ ಜೊತೆ ಕೆಲವು ಸಮಯವನ್ನು ನೀಡುವುದರಿಂದ ಅವರ ವೃತ್ತಿಯ ಜೊತೆ ಸರ್ವಾಂಗಿನಿಯ ಅಭಿವೃದ್ಧಿಯಾಗಲು ಸಾಧ್ಯ. ಜೀವ ಉಳಿಸುವ ವೈದ್ಯರನ್ನು ಗೌರವಿಸುವಿದು ನಮ್ಮೆಲ್ಲರ ಹೊಣೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದ್ದಾರೆ.
ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಇತ್ತೀಚೆಗೆ ಆಯೋಜಿ ಸಲಾದ ವೈದ್ಯರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ವಹಿಸಿದ್ದರು. ಹಿರಿಯ ವೈದ್ಯರಾದ ಡಾ.ನೋರ್ಮನ್ ಮೆನ್ಡೋನ್ಸ, ಡಾ.ಆದಿತ್ಯ ಭಾರದ್ವಜ್, ಡಾ.ಅಜಯ್ ಕುಡ್ಡ, ಡಾ.ಸುದೀಂದ್ರ ಎ.ಎನ್., ಡಾ.ಹರ್ಷ ಡಿ.ಎಸ್., ಡಾ.ದುರ್ಗಾ ಪ್ರಸಾದ್ ನಾಯಕ್ ವೈ.ಜಿ., ಡಾ.ದಿವ್ಯಲಕ್ಷ್ಮಿ ಕೆ.ಎಸ್., ಡಾ.ಪ್ರಜಾಕ್ತ ಕುಲಕರ್ಣಿ, ಡಾ.ಸೌಜನ್ಯ ಕೆ., ಡಾ.ಮಾಯಾ ನಟರಾಜನ್, ಡಾ. ಪ್ರೀತಿ ಬಲ್ಲಾಳ್ ಅವರನ್ನು ಸನ್ಮನಿಸಲಾಯಿತು. ಪ್ರಸಾದ್ ನೇತ್ರಾಲಯದಲ್ಲಿ ಸೇವೆ ಸಲ್ಲಿಸಿದ ವೈದ್ಯರನ್ನು ಅಭಿನಂಧಿಸಲಾಯಿತು.
ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಜಯ್ ಕುಮಾರ್ ಮಾತನಾಡಿದರು. ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್, ಮಂಗಳೂರು ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ.ವಿಕ್ರಮ್ ಜೈನ್, ಡಾ. ಹರೀಶ್ ಶೆಟ್ಟಿ, ಡಾ.ಜಾಕೋಬ್ ಚಾಕೊ, ಡಾ.ಶಿಬಿನ್ ಗಿರೀಶ್ ಉಪಸ್ಥಿತರಿದ್ದರು.
ಆಸ್ಪತ್ರೆಯ ಸಾರ್ವಜನಿಕ ಸಂರ್ಪಕ ಅಧಿಕಾರಿ ಮನೋಜ್ ಕಾರ್ಯಕ್ರಮ ನಿರೂಪಿಸಿದರು. ನೂತನ್ ಸ್ವಾಗರಿಸಿದರು. ಲಕ್ಷಿತ ವಂದಿಸಿದರು.







