ಬಾಲಕ ಅನುಮಾನಾಸ್ಪದವಾಗಿ ಮೃತ್ಯು: ಪ್ರಕರಣ ದಾಖಲು

ಮಲ್ಪೆ, ಜು.16: ಬಾಲಕನೋರ್ವ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ತೆಂಕಡಿನಿಯೂರು ಎಂಬಲ್ಲಿ ಜು.14ರಂದು ರಾತ್ರಿ 7.30ರ ಸುಮಾರಿಗೆ ನಡೆದಿದೆ.
ಮೃತರನ್ನು ತೆಂಕನಿಡಿಯೂರು ಗ್ರಾಮದ ಅಶ್ವಿನ್ ಜೀವನ್ ಫ್ರಾನ್ಸಿಸ್ ಡಿಸೋಜ ಎಂಬವರ ಮಗ ರಾನ್ಸ್ ಕ್ಯಾತಲ್ ಡಿಸೋಜ(12) ಎಂದು ಗುರುತಿಸಲಾಗಿದೆ. ರಾತ್ರಿ ಸ್ನಾನ ಮಾಡಲು ಹೋದ ರಾನ್ಸ್ ರೂಮಿನ ಬೆಡ್ ಮೇಲೆ ಬಿದ್ದುಕೊಂಡಿದ್ದು, ಬಾಯಿಯಲ್ಲಿ ಜೊಲ್ಲು ಹೊರಗೆ ಬಂದಿದೆ ಎಂದು ಅವರ ಎರಡನೇ ಮಗಳು ದೂರವಾಣಿ ಕರೆಮಾಡಿ ತಂದೆಗೆ ತಿಳಿಸಿದ್ದಳು.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾನ್ಸ್, ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ರಾನ್ಸ್ ಡಿಸೋಜ ಅನುಮಾನಾಸ್ಪದವಾಗಿ ಮೃತಪಟ್ಟಿರುವುದಾಗಿ ತಂದೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈತ ಪೆರಂಪಳ್ಳಿಯ ಖಾಸಗಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದುಬಂದಿದೆ.
Next Story





