ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರಾಮಚಂದ್ರ ನಿಧನ
ಕಣ್ಣುಗಳನ್ನು ದಾನ ಮಾಡಿದ ಕುಟುಂಬಿಕರು

ಕುಂದಾಪುರ, ಜು.17: ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಬೈಂದೂರು ಪಡುವರಿ ಗ್ರಾಮದ ಸೆಳ್ಳೆಕುಳ್ಳಿ ಮೂಲದ ರಾಮಚಂದ್ರ (48) ಅಲ್ಪಕಾಲದ ಅಸೌಖ್ಯದಿಂದಾಗಿ ಗುರುವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗಂಗೊಳ್ಳಿ, ಹಿರಿಯಡ್ಕ, ಮಣಿಪಾಲ ಹಾಗೂ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಸದ್ಯದಲ್ಲೇ ಸಹಾಯಕ ಉಪ ನಿರೀಕ್ಷಕರಾಗಿ ಭಡ್ತಿ ಹೊಂದುವ ಪಟ್ಟಿಯಲ್ಲಿ ಇದ್ದರೆಂದು ತಿಳಿದುಬಂದಿದೆ.
ಮೃತರ ಕಣ್ಣುಗಳನ್ನು ದಾನವಾಗಿ ನೀಡಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮೃತರು ತಂದೆ-ತಾಯಿ, ಸಹೋದರ ಪತ್ನಿ ಹಾಗೂ ಪುತ್ರರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ: ಶುಕ್ರವಾರ ಬೆಳಿಗ್ಗೆ ರಾಮಚಂದ್ರ ಅವರ ಹುಟ್ಟೂರಾದ ಬೈಂದೂರಿನಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Next Story





