ಉಡುಪಿ ಟ್ರಾಫಿಕ್ ಎಸ್ಸೈ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು

ಉಡುಪಿ, ಜು.18: ನಗರದ ಕರಾವಳಿ ಬೈಪಾಸ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಜು.17ರಂದು ಬೆಳಗ್ಗೆ ನಡೆದಿದೆ.
ಪೊಲೀಸ್ ಉಪನಿರೀಕ್ಷಕ ಹುಸೇನಸಾಬ ಕಾಶಿಮಸಾಬ ಚಪ್ಪರಕರ ಸಿಬ್ಬಂದಿ ಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಅಂಬಲಪಾಡಿ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಕಾರನ್ನು ಚಾಲಕ ಸೀಟ್ ಬೆಲ್ಟ್ ಧರಿಸದ ಕಾರಣ ತಡೆದು ನಿಲ್ಲಿಸಿದರು.
ಚಾಲಕನ ಬಳಿ ದಾಖಲೆ ಪತ್ರ ತೋರಿಸುವಂತೆ ಹೇಳಿದಾಗ ಚಾಲಕನು ದಾಖಲಾತಿ ನೀಡದೇ ಕಾರನ್ನು ಚಲಾಯಿಸಿಕೊಂಡು ಹೋಗಲು ಮುಂದಾ ದನು. ನಂತರ ಚಾಲಕನ ದಾಖಲಾತಿ ನೋಡಿದಾಗ ಚಾಲಕನ ಹೆಸರು ಕುರಿಯನ್ ಎಂಬುದಾಗಿ ಇತ್ತು. ಆತನಿಗೆ ನೋಟೀಸ್ ನೀಡಿದಾಗ ಆತ ಸಹಿ ಮಾಡಲು ನಿರಾಕರಿಸಿ, ಪೊಲೀಸ್ ಉಪನಿರೀಕ್ಷಕರ ಕೈಯಲ್ಲಿದ್ದ ವಾಹನ ಚಾಲನ ಪ್ರಮಾಣಪತ್ರವನ್ನು ಕಿತ್ತುಕೊಳ್ಳಲು ದಾಳಿ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





