ಉಡುಪಿ ಜಿಲ್ಲೆಯಾದ್ಯಂತ ಗಾಳಿಮಳೆಗೆ ಐದು ಮನೆಗಳಿಗೆ ಹಾನಿ

ಉಡುಪಿ, ಜು.18: ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರವೂ ಭಾರೀ ಮಳೆಯಾಗಿದ್ದು, ಗಾಳಿಮಳೆಗೆ ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ- 33.5ಮಿ.ಮೀ., ಕುಂದಾಪುರ- 21.4ಮಿ.ಮೀ., ಉಡುಪಿ- 33.6ಮಿ.ಮೀ., ಬೈಂದೂರು- 25.2ಮಿ.ಮೀ., ಬ್ರಹ್ಮಾವರ- 25.8ಮಿ.ಮೀ., ಕಾಪು- 34.3ಮಿ.ಮೀ., ಹೆಬ್ರಿ-16.1ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 26.0ಮಿ.ಮೀ. ಮಳೆಯಾಗಿದೆ.
ಬ್ರಹ್ಮಾವರ ತಾಲೂಕು ಕಾರ್ಕಡ ಗ್ರಾಮದ ರತ್ನ ಆಚಾರ್ತಿ ಅವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿ 20,000ರೂ., ಚಾಂತಾರು ಗ್ರಾಮದ ಜ್ಯೋತಿ ದೇವಾಡಿಗ ಅವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿ 15,000ರೂ. ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಗಾಯತ್ರಿ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 40,000ರೂ., ಕಂದಾವರ ಗ್ರಾಮದ ಅಕ್ಕಮ್ಮ ಎಂಬವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿ 50,000ರೂ. ಕಾಪು ತಾಲೂಕು ತೆಂಕ ಗ್ರಾಮದ ಅಬ್ದುಲ್ ಶರೀಫ್ ಇವರ ಮನೆ ಮಳೆಯಿಂದ ಭಾಗಶಃ ಹಾನಿಯಾಗಿ 100,000ರೂ. ನಷ್ಟವಾಗಿದೆ.
Next Story





