ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಆಶ್ರಯದಲ್ಲಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಆಯೋಜಿಸಲಾದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರದಲ್ಲಿ 76 ಮಂದಿ ಸದುಪಯೋಗ ಪಡೆದುಕೊಂಡರು.
ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಡಾ.ರೋಶನ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ರಮಾನಂದ ಎಲ್.ನಾಯಕ್, ಲಯನ್ಸ್ ವಲಯಾಧ್ಯಕ್ಷ ಲೂಯಿಸ್ ಲೋಬೊ, ಶಿಬಿರದ ನಿರ್ದೇಶಕ ಪ್ರಕಾಶ್ ಅಂದ್ರಾದೆ, ಜತೆ ಕಾರ್ಯದರ್ಶಿ ಪ್ರಕಾಶ್ ಎಂ.ಡಿ. ಭಟ್, ಮೇಯರ್ ಆರ್ಗಾನಿಕ್ಸ್ ಪ್ರೈವೆಟ್ ಲಿಮಿಟೆಡ್‌ನ ವಿನಾಯಕ ಪೈ ತೋನ್ಸೆ ಮೊದಲಾದವರು ಉಪಸ್ಥಿತರಿದ್ದರು.
Next Story





