ಭಾರೀ ಮಳೆ: ಗದ್ದೆಯ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು

ಪಡುಬಿದ್ರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ವ್ಯಕ್ತಿಯೊಬ್ಬರು ಗದ್ದೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಪಡುಬಿದ್ರೆ ಕಲ್ಲೊಟ್ಟೆ ಬ್ರಿಡ್ಜ್ ಬಳಿ ಜು.17ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ನಡ್ಸಾಲು ಗ್ರಾಮದ ಚಂದ್ರಶೇಖರ್(52) ಎಂದು ಗುರುತಿಸ ಲಾಗಿದೆ. ಇವರು ಮನೆಯಿಂದ ಜು.17ರಂದು ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಜು.18ರಂದು ರಾತ್ರಿ ಕಲ್ಲೊಟ್ಟೆ ಬ್ರಿಡ್ಜ್ ಬಳಿಯ ನೀರು ತುಂಬಿದ ಗದ್ದೆಯ ಇವರ ಮೃತದೇಹ ಪತ್ತೆಯಾಗಿದೆ.
ನಿರಂತರವಾಗಿ ಸುರಿದ ಮಳೆಯ ನೀರಿನಿಂದ ಇವರು ಗದ್ದೆಯ ಬದಿಯಲ್ಲಿ ರಸ್ತೆ ದಾಟುತ್ತಿರುವಾಗ ಆಕಸ್ಮಿಕ ವಾಗಿ ಗದ್ದೆಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





