ಅಂದರ್ ಬಾಹರ್: ಆರು ಮಂದಿ ಬಂಧನ

ಉಡುಪಿ, ಜು.19: ಅಚ್ಲಾಡಿ ಗ್ರಾಮದ ಗರಿಕೆಮಠ ಎಂಬಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಆರೋಪಿಗಳನ್ನು ಮಂದಿಯನ್ನು ಕೋಟ ಪೊಲೀಸರು ಜು.18ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.
ಶಿರಿಯಾರ ಗ್ರಾಮದ ಗರಿಕೆಮಠಯ ರಾಜು ಶೆಟ್ಟಿ(71), ಮೊಗೆಬೆಟ್ಟು ಪಡು ಮುಂಡುವಿನ ರಾಜು ಶೆಟ್ಟಿ(57), ಕೃಷ್ಣ(40), ಬಾರಕೂರು ರಂಗನಕೆರೆಯ ರಮಾನಂದ ಶೆಟ್ಟಿ(21), ಆಕಾಶವಾಣಿ ಬಳಿಯ ಸಂತೋಷ(56), ಮಧುವನದ ರಾಜೀವ ಶೆಟ್ಟಿ(65) ಬಂಧಿತ ಆರೋಪಿಗಳು. ಇವರಿಂದ ಆಟಕ್ಕೆ ಬಳಸಿದ ಒಟ್ಟು 15450 ರೂ., 3 ಕಾರು, 2 ಸ್ಕೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





