ಹೊಡೆದಾಟ: ಆರೋಪಿಗಳ ವಿರುದ್ಧದ ಪ್ರಕರಣ ರದ್ದು

ಹೆಬ್ರಿ, ಜು.26: ನಾಡ್ಪಾಲು ಗ್ರಾಮದ ನಂದಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವಿಚಾರದಲ್ಲಿನ ಹೊಡೆದಾಟ ಪ್ರಕರಣದ ಆರೋಪಿಗಳಾದ ಅನಿಲ್ ಶೆಟ್ಟಿ, ಪ್ರವೀಣ್ ಶೆಟ್ಟಿ ಮತ್ತು ಸುಪ್ರೀತ್ ಭಂಡಾರಿ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊಕದ್ದಮೆಗಳನ್ನು ಹೈಕೋರ್ಟ್ ರದ್ದು ಪಡಿಸಿ ಆದೇಶ ನೀಡಿದೆ.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರ ಕುಟುಂಬ ಹಾಗೂ ಸ್ಥಳೀಯರು 2025ರ ಫೆ.21ರಂದು ಹೊಡೆದಾಟ ಮಾಡಿಕೊಂಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
1000ರೂ. ದಂಡ: ಈ ಪ್ರಕರಣದ ಇತರ ಆರೋಪಿಗಳಾದ ಸುದರ್ಶನ್ ಹೆಗ್ಡೆ, ರಾಘವೇಂದ್ರ ಶೆಟ್ಟಿ, ಉಮೇಶ್ ಶೆಟ್ಟಿ ಮುನಿಯಾಲ್, ನಾಗರಾಜ್, ಶ್ರೀನಿವಾಸ ನಾಯಕ್ ಅನುವಂಶಿಕ ಆಡಳಿತ ಮೊಕ್ತೇಸರರ ಕುಟುಂಬದ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಅವರಿಗೆ ಕಾರ್ಕಳ ಜೆಎಂಎಫ್‌ಸಿ ನ್ಯಾಯಾಲಯ ತಲಾ 1000 ದಂಡ ವಿಧಿಸಿ ಆದೇಶ ನೀಡಿದೆ ಎಂದು ತಿಳಿದುಬಂದಿದೆ.
Next Story





