ಮಳೆಯಿಂದ ಜಲಾವೃತವಾದ ಕುಂದಾಪುರದ ಶನಿವಾರ ಸಂತೆ!

ಕುಂದಾಪುರ: ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಗಾಳಿ ಹಾಗೂ ಮಳೆಯಿಂದಾಗಿ ಕುಂದಾಪುರದ ಶನಿವಾರ ಸಂತೆ ಮಾರುಕಟ್ಟೆ ಆವರಣ ಭಾಗಶಃ ಜಲಾವೃತವಾಗಿ ಗ್ರಾಹಕರು ಹಾಗೂ ವರ್ತಕರು ಪರದಾಡುವಂತಾದ ಘಟನೆ ವರದಿಯಾಗಿದೆ.
ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಸಂಗಮ್ ಬಳಿ ಸರ್ವೀಸ್ ರಸ್ತೆ ಸನಿಹದ ಎಪಿಎಂಸಿ ಆವರಣದಲ್ಲಿ ರುವ ಪ್ರತಿ ಶನಿವಾರ ನಡೆಯುವ ಸಂತೆಗೆ ದೂರದ ಜಿಲ್ಲೆಗಳು, ಊರುಗಳಿಂದ ವ್ಯಾಪಾರಸ್ಥರು ಹಾಗೂ ಉಭಯ ತಾಲೂಕಿನ ಖರೀದಿದಾರರು ಆಗಮಿಸುವುದು ವಾಡಿಕೆ. ಶನಿವಾರ ದಿನವಿಡಿ ಸುರಿದ ಬಾರೀ ಮಳೆಯಿಂದಾಗಿ ಸಂತೆ ಮಾರುಕಟ್ಟೆಯ ಬಹುತೇಕ ಕಡೆ ಮೊಣಕಾಲೆತ್ತರಕ್ಕೆ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಇನ್ನು ಚರಂಡಿಗಳಿಗೆ ಕಾಂಕ್ರಿಟ್ ಸ್ಲಾಬ್ ಇಲ್ಲದ ಕಾರಣ ನೀರು ಹರಿಯು ವಿಕೆಯ ಮಾಹಿತಿಯಿಲ್ಲದೆ ಬಹಳಷ್ಟು ಮಂದಿ ಚರಂಡಿಗೆ ಬಿದ್ದಿರುವ ಘಟನೆಗಳು ವರದಿಯಾಗಿದೆ. ಚರಂಡಿಯಲ್ಲಿ ಪ್ಲಾಸ್ಟಿಕ್ ವಸ್ತುಗಳು ಸಿಲುಕಿರುವುದು, ಸಂಬಂದಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಮುತುವರ್ಜಿ ವಹಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇಲ್ಲಿನ ಶನಿವಾರದ ಸಂತೆ ಬಹಳಷ್ಟು ದೊಡ್ಡದು. ಸಾವಿರಾರು ಮಂದಿ ಇಲ್ಲಿಗೆ ಆಗಮಿಸಿ ಕ್ರಯ-ವಿಕ್ರಯದಲ್ಲಿ ಭಾಗಿಯಾಗುತ್ತಾರೆ. ಹೂ-ಹಣ್ಣು, ತರಕಾರಿ, ದಿನಸಿ, ಒಣಮೀನು, ತಿಂಡಿ-ತಿನಿಸುಗಳು, ಸ್ಥಳೀಯವಾಗಿ ಬೆಳೆಯುವ ತರಕಾರಿ ದೊರಕುವ ಹಿನ್ನೆಲೆ ಸಂತೆಗೆ ಬರುವ ಜನರ ಸಂಖ್ಯೆ ದೊಡ್ಡದು. ಇಲ್ಲಿ ವಹಿವಾಟು ಮಾಡುವ ವರ್ತಕರಿಂದ ಎಪಿಎಂಸಿ ಸುಂಕ ಪಡೆಯುತ್ತದೆ. ಆದರೆ ಮಳೆ ಬಂದರೆ ಹೊಳೆ ಯಂತಾಗುವ ಆವರಣ. ಬಹುತೇಕ ಯಾವುದೇ ಮೂಲಸೌಕರ್ಯಗಳಿಲ್ಲ ಎಂದು ನಾಗರಿಕರು ತಿಳಿಸಿದ್ದಾರೆ.







