ಎಳ್ಳಾರೆಯಲ್ಲಿ ರಕ್ತದಾನ ಶಿಬಿರ

ಕಾರ್ಕಳ, ಜು.29: ನಾವು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ರಾಗಿರಬಹುದು ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಅವರು ಎಳ್ಳಾರೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಐಎಎಸ್ ಅಧಿಕಾರಿ ಸದಾಶಿವ ಪ್ರಭು ಎಳ್ಳಾರೆ, ಮಂಗಳೂರು ವಿಭಾಗ ಗ್ರಾಮವಿಕಾಸ ಟೋಳಿ ಸದಸ್ಯೆ ರಮಿತಾ ಶೈಲೇಂದ್ರ, ಕಡ್ತಲ ಗ್ರಾಪಂ ಅಧ್ಯಕ್ಷ ಸುಕೇಶ್ ಹೆಗ್ಡೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್, ವೈದ್ಯ ಡಾ.ಪ್ರಮೋದ್ ಕುಮಾರ್ ಹೆಗ್ಡೆ, ಲಯನ್ಸ್ ಕ್ಲಬ್ ಮುನಿಯಾಲಿನ ಅಧ್ಯಕ್ಷ ಸಂದೇಶ್ ಶೆಟ್ಟಿ, ಶ್ರೀ ಜನಾರ್ದನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಶೆಟ್ಟಿ ಮುಂಡಾರು, ಉದ್ಯಮಿ ದಿನೇಶ್ ಕಿಣಿ, ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ ಸಂಸ್ಥಾಪಕ ದೇವೇಂದ್ರ ಕಾಮತ್, ಅಧ್ಯಕ್ಷೆ ಶಾಂತಿ ಪ್ರಭು ಉಪಸ್ಥಿತರಿದ್ದರು.
ಶಾಂತಿ ಪ್ರಭು ಸ್ವಾಗತಿಸಿದರು. ಹರೀಶ್ ಶೆಟ್ಟಿ ವಂದಿಸಿದರು.
ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
104 ಜನರು ರಕ್ತದಾನ ಮಾಡಿದರು.





