ಯೋಜನೆ, ಮಾಹಿತಿ ಕೊರತೆಯಿಂದ ಕೃಷಿ ನಷ್ಟ: ರತ್ನಾಕರ ಶೆಟ್ಟಿ ಆರೂರು

ಬ್ರಹ್ಮಾವರ: ತುಂಡು ಭೂಮಿ ಹಿಡುವಳೀದಾರರು ಹೆಚ್ಚಿರುವ ನಮ್ಮ ಜಿಲ್ಲೆಯಲ್ಲಿ ಮಾಹಿತಿ ಕೊರತೆಯಿಂದ ಕೃಷಿ ನಷ್ಟದಾಯಕವಾಗುತ್ತಿದೆ. ಅಲ್ಲದೆ ಕೃಷಿಯಲ್ಲಿ ತೊಡಗುವಂತೆ ಸರಕಾರಗಳು ಯುವ ಜನತೆಗೆ ಯಾವ ಯೋಜನೆಗಳನ್ನೂ ರೂಪಿಸದಿರುವುದರಿಂದ ಇಂದು ಕೃಷಿಯಿಂದ ವಿಮುಖ ರಾಗುವವರು ಹೆಚ್ಚಾಗಿ ಜಮೀನು ಹಡೀಲು ಬೀಳುತ್ತಿದೆ ಎಂದು ನಿವೃತ್ತ ಶಿಕ್ಷಕ, ಆರೂರು ಗ್ರಾಪಂ ಸದಸ್ಯ ರತ್ನಾಕರ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘ ಆರೂರು ಹೆಬ್ಬಾರಬೆಟ್ಟು ಆಶಾ ನಿಲಯದಲ್ಲಿ ಆಯೋಜಿಸಲಾದ ವೈಜ್ಞಾನಿಕ ತೆಂಗು ಮತ್ತು ಅಡಿಕೆ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗುರುರಾಜ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರು ಬೆರಂಬೈಲು ಉದಯ ಕುಮಾರ್ ಶೆಟ್ಟಿ ಚೇರ್ಕಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಧರ ಶೆಟ್ಟಿ ಮುಂಡ್ಕಿನಜಡ್ಡು, ಚೇರ್ಕಾಡಿ ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಕುರುಡುಂಜೆ, ಆನಂದ ಶೆಟ್ಟಿ ಕುದ್ಕುಂಜೆ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ವೈಜ್ಞಾನಿಕವಾಗಿ ಕಡಿಮೆ ಖರ್ಚು, ಕಡಿಮೆ ಶ್ರಮ, ಕಡಿಮೆ ನೀರು-ಗೊಬ್ಬರ ಬಳಕೆ ಮಾಡಿ ಲಾದಾಯಕ ತೆಂಗು-ಅಡಿಕೆ ಕೃಷಿ ಮಾಡುವ ಸುಲ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕುರುಡುಂಜೆ ರತ್ನಾಕರ ಶೆಟ್ಟಿ, ರಮೇಶ್ ಶೆಟ್ಟಿ, ಸುಂದರ ಶೆಟ್ಟಿ, ಸಂತೋಷ್ ಶೆಟ್ಟಿ, ರೇವತಿ ಶೆಟ್ಟಿ ಹೆಬ್ಬಾರ ಬೆಟ್ಟು, ಉಮೇಶ್ ಭಟ್, ಗಣೇಶ್ ನಾಯ್ಕ ಗೋರ್ಪಾಡಿ, ಮಮತಾ ಶೆಟ್ಟಿ ಆಲುಂಜೆ, ಸುಧೀರ್ ಶೆಟ್ಟಿ ಕುದ್ಕುಂಜೆ, ಕರುಣಾಕರ ಶೆಟ್ಟಿ ಹಾವಂಜೆ, ಅಮೃತ ಕುಮಾರ್ ಚೇರ್ಕಾಡಿ, ಮಡಿ ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರತ್ನಾಕರ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಆನಂದ ಶೆಟ್ಟಿ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.







