ಚುಟುಕು ಕವನ ಆಹ್ವಾನ

ಉಡುಪಿ, ಜು.29: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕವು ಎರಡನೇ ಚುಟುಕು ಸಂಕಲನವನ್ನು ಹೊರ ತರಲು ನಿರ್ಧರಿಸಿದ್ದು, ಉತ್ತರ ಕನ್ನಡ, ಉಡುಪಿ, ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳ ಚುಟುಕು ಸಾಹಿತಿಗಳಿಂದ ಚುಟುಕುಗಳನ್ನು ಆಹ್ವಾನಿಸಿದೆ.
ಆಸಕ್ತರು ಸ್ವರಚಿತ ಐದು ಚುಟುಕುಗಳ ಜೊತೆಗೆ ತಮ್ಮ ಕಿರು ಪರಿಚಯ ದೊಂದಿಗೆ ಆ.15ರೊಳಗೆ ಚುಟುಕುಗಳನ್ನು ಜಿ.ಯು.ನಾಯಕ, ಜಿಲ್ಲಾಧ್ಯಕ್ಷರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಉತ್ತರಕನ್ನಡ ಜಿಲ್ಲೆ, ಗೋಕುಲ, ಗ್ರಾಮ ಬೋಳೆ, ಅಂಚೆ ಶೆಟಗೇರಿ, ಅಂಕೋಲಾ ತಾಲೂಕು, ಪಿನ್-581353 ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ 9663770097ನ್ನು ಸಂಪರ್ಕಿಸ ಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





