ಜಾನುವಾರು ಕಳವು ಪ್ರಕರಣ: ಇಬ್ಬರು ಆರೋಪಿಗಳ ಸೆರೆ

ಹಿರಿಯಡ್ಕ: ಜಾನುವಾರುಗಳನ್ನು ಕಳವುಗೈದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಹಿರಿಯಡ್ಕ ಪೊಲೀಸರು ಆತ್ರಾಡಿ ಗ್ರಾಮದ ಪರೀಕ ಶಿವಗುಂಡಿ ಎಂಬಲ್ಲಿ ಜು.30ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದಾರೆ.
ಕಟಪಾಡಿ ಮೂಡಬೆಟ್ಟು ಗ್ರಾಮದ ಮೆಹಬೂಬ ಸಾಹೇಬ್(65) ಹಾಗೂ ಸುಳ್ಯ ಹೊಸಹೊಳಿಕೆಯ ಪದ್ಮನಾಭ (57) ಬಂಧಿತ ಆರೋಪಿಗಳು. ಇವರು ಮೇಯುತ್ತಿದ್ದ ಎರಡು ಜಾನುವಾರುಗಳನ್ನು ಕಳವು ಮಾಡಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದು, ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





