ಕೊಂಕಣ ರೈಲ್ವೆ: ಕಾರವಾರ ವಿದ್ಯುತ್ ಸಬ್‌ಸ್ಟೇಶನ್ ಉದ್ಘಾಟನೆ

ಉಡುಪಿ: ಕೊಂಕಣ ರೈಲ್ವೆಯ ಕಾರವಾರ ವಿದ್ಯುತ್ ಸರಬರಾಜಿನ ಸಬ್‌ಸ್ಟೇಶನ್ (ಟಿಎಸ್‌ಎಸ್)ನ್ನು ಗುರುವಾರ ಕೊಂಕಣ ರೈಲ್ವೆ ಕಾರ್ಪೋರೇಷನ್‌ನ (ಕೆಆರ್‌ಸಿಎಲ್) ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂತೋಷ್‌ಕುಮಾರ್ ಝಾ ಅವರು ಉದ್ಘಾಟಿಸಿದರು.
ಕಾರವಾರದಲ್ಲಿ ವಿದ್ಯುತ್ ಸಬ್‌ಸ್ಟೇಶನ್ ಪ್ರಾರಂಭಗೊಂಡಿರುವುದರಿಂದ ಈವರೆಗೆ ಬಲ್ಲಿ ಟಿಎಸ್‌ಎಸ್‌ನಲ್ಲಿ ನಿಭಾಯಿಸಲಾಗುತ್ತಿದ್ದ ವಿದ್ಯುತ್ ಲೋಡ್‌ನ ಶೇ.40ರಿಂದ 50ರಷ್ಟು ಭಾಗ ಕಾರವಾರಕ್ಕೆ ವರ್ಗಾವಣೆ ಗೊಳ್ಳಲಿದೆ ಎಂದವರು ತಿಳಿಸಿದರು.
ಕದ್ರಾ ವಿದ್ಯುತ್ ಉತ್ಪಾದನಾ ಕೇಂದ್ರದಿಂದ 110ಕೆವಿ ವಿದ್ಯುತ್ ಇಲ್ಲಿಗೆ ಸರಬರಾಜು ಆಗಲಿದೆ. ಇದರಿಂದ ವಾರ್ಷಿಕವಾಗಿ 2 ಕೋಟಿ ರೂ ಮೌಲ್ಯದ ಇಂಧನ ಉಳಿತಾಯವಾಗಲಿದೆ. ಅಲ್ಲದೇ ನಿರಂತರ ವಿದ್ಯುತ್ ಸರಬರಾಜು, ಸರಬರಾಜಿನಲ್ಲಿ ಸ್ಥಿರತೆ ಇರಲಿದ್ದು, ವಿದ್ಯುತ್ ಚಾಲಿತ ರೈಲುಗಳು ತಡೆ ರಹಿತವಾಗಿ ಚಲಿಸಲು ಸಾಧ್ಯವಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
Next Story







