ಉಡುಪಿ: ಮೂರು ಮನೆಗಳಿಗೆ ಹಾನಿ

ಉಡುಪಿ, ಆ.1: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಮನೆ ಹಾಗೂ ಸೊತ್ತುಗಳಿಗೆ ಹಾನಿಯ ಪ್ರಕರಣಗಳು ಮುಂದುವರಿದಿದೆ. ಇಂದು ಜಿಲ್ಲೆಯಲ್ಲಿ ಮೂರು ಮನೆಗಳಿಗೆ ಹಾನಿಯ ವರದಿ ಬಂದಿದ್ದು ಒಟ್ಟು 1.10ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕಿನ ಹಡವು ಗ್ರಾಮದ ಗುರುರಾಜ್ ಎಂಬವರ ಮನೆ ಮಳೆಯಿಂದ ಭಾಗಶ: ಹಾನಿಗೊಳಗಾಗಿದ್ದು 70ಸಾವಿರ ರೂ.ನಷ್ಟವಾಗಿದ್ದರೆ ಕಿರಿಮಂಜೇಶ್ವರ ಗ್ರಾಮದ ನಸೀಮಾ ಬಾನು ಎಂಬವರ ಮನೆಗೂ ಹಾನಿ ಯುಂಟಾಗಿದ್ದು 30ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಚಂದ್ರಯ್ಯ ಆಚಾರ್ ಇವರ ಮನೆಗೂ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು 10ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ಇಂದು ಸರಾಸರಿ 19 ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ ಅತ್ಯಧಿಕ 29.1ಮಿ.ಮೀ. ಮಳೆಯಾದರೆ, ಉಡುಪಿಯಲ್ಲಿ 25.7, ಕಾಪುವಲ್ಲಿ 24.8 ಹಾಗೂ ಬ್ರಹ್ಮಾವರದಲ್ಲಿ 21.9ಮಿ.ಮೀ. ಮಳೆಯಾದ ವರದಿ ಬಂದಿದೆ.
Next Story





