ಕಾರ್ಕಳ ಎಸ್.ವಿ.ಟಿ. ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿ ರೇಷ್ಮಾ ಶೆಟ್ಟಿ ಗೋರೂರು ಆಟಿ ತಿಂಗಳ ಮಹತ್ವ ಮತ್ತು ವಿಶೇಷ ಸಂಪ್ರದಾಯಿಕ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು.
ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸುವ ಸುಮಾರು 33 ಬಗೆಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶನ ಮಾಡಿದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಗುಂಡ ಕಟ್ಟುವ, ಹೂ ಕಟ್ಟುವ, ಚೇಟ್ಲಾ, ಲಗೋರಿ, ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಲಿಂಬೆ ಚಮಚ ಓಟ ಸೇರಿದಂತೆ ವಿವಿಧ ಬಗೆಯ ಆಟಗಳ ಸ್ಪರ್ಧಿಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ನೇಮಿರಾಜ ಶೆಟ್ಟಿ ಕೆ. ವಹಿಸಿದ್ದರು.
ಸುಮಂಗಲಾ ಪ್ರಭು, ಪ್ರಭಾತ್ ರಂಜನ್, ದೇವದಾಸ್ ಕೆರೆಮನೆ, ಸುನೀಲ್ ಎಸ್. ಶೆಟ್ಟಿ, ಪದ್ಮಪ್ರಭಾ ಇಂದ್ರ, ಪ್ರಭಾ ಜಿ. ಭೋವಿ, ಪ್ರಿಯಾ ಪ್ರಭು, ಪ್ರಭಾವತಿ ಹೆಗ್ಡೆ, ಮಹಾಲಕ್ಷ್ಮೀ ಶೆಣೈ, ಹರೀಶ್ ಕೆ. ಉಪಸ್ಥಿತರಿದ್ದರು.
ಹಿಂದಿ ಉಪನ್ಯಾಸಕಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ಉಪನ್ಯಾಸಕ ಪ್ರಕಾಶ್ ನಾಯ್ಕ್ ಸ್ವಾಗತಿಸಿದರು. ಗಣಕಶಾಸ್ತ್ರ ಉಪನ್ಯಾಸಕಿ ರಶ್ಮಿತಾ ವಂದಿಸಿದರು.







