ವಿದ್ಯಾರ್ಥಿ ಸಹಾಯಧನ ವಿತರಣೆ, ಸಾಧಕರಿಗೆ ಸಮ್ಮಾನ

ಕುಂದಾಪುರ, ಆ.3: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಶ್ರೀನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಆಶ್ರಯದಲ್ಲಿ ದಿ.ಸುರೇಶ್ ಎಸ್. ಪೂಜಾರಿ ಪಡುಕೋಣೆ ಅವರಿಂದ ಆರಂಭಗೊಂಡ 33ನೇ ವರ್ಷದ ವಿದ್ಯಾರ್ಥಿ ಸಹಾಯಧನ ವಿತರಣೆ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ರವಿವಾರ ಕುಂದಾಪುರ ಶ್ರೀನಾರಾಯಣ ಗುರು ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಂಬಯಿ ಉದ್ಯಮಿ ಭರತ್ ಎಸ್.ಪೂಜಾರಿ ಮಾತನಾಡಿ, ಶಿಕ್ಷಣದಿಂದ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ತಲುಪಲು ಸಾಧ್ಯವಿದೆ. ಮಹಿಳಾ ಸಶಕ್ತೀಕರಣದಲ್ಲೂ ವಿದ್ಯೆಯ ಪಾತ್ರ ಬಹಳ ಮಹತ್ತರವಾಗಿದೆ. ಕಠಿನ ಪರಿಶ್ರಮ ಪಟ್ಟರೆ ಸಾಧನೆ ಸಿದ್ಧಿಸುತ್ತದೆ ಎಂದು ತಿಳಿಸಿದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಉದ್ಯಮಿ ವಿಜಯ ಪಿ.ಪೂಜಾರಿ, ಡೈನಮಿಕ್ ಇನೋಟೆಕ್‌ನ ಧೀರಜ್ ಹೆಜಮಾಡಿ, ಉದ್ಯಮಿಗಳಾದ ದುಬನ ಮಂಜುನಾಥ ಪೂಜಾರಿ, ನರಸಿಂಹ ಪೂಜಾರಿ, ರಾಘವೇಂದ್ರ ಬಿ.ಪೂಜಾರಿ ಬೆಂಗಳೂರು, ಹರೀಶ್ ಪೂಜಾರಿ ಶಿವಮೊಗ್ಗ, ಸಂಘದ ಉಪಾಧ್ಯಕ್ಷ ಶಿವರಾಮ ಪೂಜಾರಿ ಬಸ್ರೂರು, ಮಹಿಳಾ ಘಟಕಾಧ್ಯಕ್ಷೆ ಗಿರಿಜಾ ಮಾಣಿಗೋಪಾಲ್, ಕೋಶಾಧಿಕಾರಿ ವಿನಯ್ ಪೂಜಾರಿ ಬನ್ನಾಡಿ ಉಪಸ್ಥಿತರಿದ್ದರು.
ಬೆಂಗಳೂರು ದಯಾನಂದ ಸಾಗರ್ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ಗಾಯತ್ರಿ, ಪತ್ರಕರ್ತ ಅಶೋಕ ಪುತ್ತೂರು, ವ್ಯಂಗ್ಯಚಿತ್ರಕಾರರಾದ ಕೇಶವ ಸಸಿಹಿತ್ಲು, ಚಂದ್ರ ಎಸ್. ಪೂಜಾರಿ, ಕೃಷಿಕರಾದ ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ರಾಮ ಪೂಜಾರಿ ಮುಲ್ಲಿಮನೆ, ಎ.ಭಾಸ್ಕರ ಪೂಜಾರಿ ನಡೂರು, ಸಮಾಜ ಸೇವಕ ರಾದ ಕೋಟಿ ಪೂಜಾರಿ, ಮಮತಾ, ಸಿಎ ರಕ್ಷಿತ್ ಕರ್ಕುಂಜೆ, ನಾಗರಾಜ್ ಹೊಳ್ಮಗೆ, ವೈಷ್ಣವಿ ಎಂ.ವಿ., ಅಕ್ಷಯ ಪೂಜಾರಿ ಕೋಣಿ ಹಾಗೂ ವಿಶೇಷ ಚೇತನ ರಾಜು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಕೋಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.







