ಕಾಂಕ್ರೀಟ್ ಕಾಮಗಾರಿ: ಬದಲಿ ಮಾರ್ಗಕ್ಕೆ ಸೂಚನೆ

ಉಡುಪಿ, ಆ.4: ಉಡುಪಿ ನಗರಸಭಾ ವ್ಯಾಪ್ತಿಯ ಅಜ್ಜರಕಾಡು ವಾರ್ಡಿನ ವಿದ್ಯಾರಣ್ಯ ರಸ್ತೆಯಲ್ಲಿ ಅಲಂಕಾರ್ ಟಾಕೀಸ್‌ನಿಂದ ಸಿಟಿ ಆಸ್ಪತ್ರೆ ತನಕ ಒಳಚರಂಡಿ ಜಾಲದ ಪೈಪ್ ಬದಲಾವಣೆ ಮಾಡಿ ಛೇಂಬರ್ ಪುನರ್ ನಿರ್ಮಾಣ ಮಾಡುವ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.
ಉಳಿದಂತೆ ಡಾಮರೀಕರಣ ಹಾಗೂ ಅಗೆದ ಭಾಗಕ್ಕೆ ಕಾಂಕ್ರೀಟ್ ಹಾಕುವ ಕಾಮಗಾರಿಯನ್ನು ನಿರ್ವ ಹಿಸಬೇಕಾಗಿರುವ ಹಿನ್ನೆಲೆಯಲ್ಲಿ ಆ.5ರಿಂದ 20ರವರೆಗೆ ಈ ರಸ್ತೆಯನ್ನು ಬಂದ್ ಮಾಡಲಾಗುವುದು. ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸಿ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Next Story





