ನಿಟ್ಟೆ : ತಾನದಗುಡ್ಡೆ ಫ್ರೆಂಡ್ಸ್, ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನ ಮನೆ ಹಸ್ತಾಂತರ

ಕಾರ್ಕಳ: ವಾಸಕ್ಕೆ ಯೋಗ್ಯವಾದ ಮನೆಯಿಲ್ಲದೆ ಸಂಕಷ್ಟದಲ್ಲಿದ್ದ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ತಾನದಗುಡ್ಡೆಯ ಶಂಕರ ಮತ್ತು ಸವಿತಾ ದಂಪತಿಗೆ ತಾನದಗುಡ್ಡೆ ಫ್ರೆಂಡ್ಸ್ ಹಾಗೂ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ನೂತನ ಮನೆ ನಿರ್ಮಿಸಿಕೊಡಲಾಗಿದೆ.
ಕಡು ಬಡತನದಿಂದಾಗಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಕುಟುಂಬದ ಪರಿಸ್ಥಿತಿಗೆ ಸ್ಪಂದಿಸಿದ ತಾನದಗುಡ್ಡೆ ಫ್ರೆಂಡ್ಸ್ ಹಾಗೂ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಒಗ್ಗೂಡಿ ಮನೆ ನಿರ್ಮಾಣ ಕಾರ್ಯ ಕೈಗೊಂಡಿದ್ದರು.
ನೂತನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದಯ್ ಶೆಟ್ಟಿ ಮುನಿಯಾಲು ಅವರು ಮನೆಯ ಬೀಗದ ಕೀಲಿಕೈಯನ್ನು ದಂಪತಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಭರತ್ ಶೆಟ್ಟಿ, ಡಾ. ಸುರೇಶ್ ಶೆಟ್ಟಿ, ಆನಂದ ಜೋಸೆಫ್, ತಾನದಗುಡ್ಡೆ ಫ್ರೆಂಡ್ಸ್ ಪ್ರಮುಖರಾದ ಮನೋಜ್ ಶೆಟ್ಟಿ, ಅರ್ಚಕ ಕೆಮ್ಮಣ್ಣು ರಾಧಾ ಭಟ್ ಸೇರಿದಂತೆ ಸ್ಥಳೀಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
Next Story




