ನ.26: ಆದಿಉಡುಪಿ ಮಾರುಕಟ್ಟೆ ಪ್ರಾಂಗಣದ ಸಂತೆ ಸ್ಥಳಾಂತರ
ಉಡುಪಿ, ನ.21: ಭಾರತದ ಪ್ರಧಾನಮಂತ್ರಿಗಳು ನ.28ರಂದು ಉಡುಪಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಬೇಕಿದ್ದ ನ.26 ಬುಧವಾರದ ವಾರದ ಸಂತೆಯನ್ನು ಸಂತೆಕಟ್ಟೆಯ ಕಲ್ಯಾಣಪುರಕ್ಕೆ ಸ್ಥಳಾಂತರಿಸಲಾಗಿದೆ.
ಆದಿಉಡುಪಿ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನ.26 ರಿಂದ 28ರವರೆಗೆ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
Next Story





