ಉಡುಪಿ ಎಂಜಿಎಂ ಕಾಲೇಜಿನಲ್ಲಿ ಒಡಿಸ್ಸಿ ನೃತ್ಯ ವೈಭವ

ಉಡುಪಿ, ಡಿ.12: ಉಡುಪಿ ಎಂ.ಜಿ.ಎಂ. ಪದವಿ ಪೂರ್ವ ಕಾಲೇಜಿನ ವತಿಯಿಂದ ನೃತ್ಯಗಾರ, ಅಂತರರಾಷ್ಟ್ರೀಯ ಕಲಾವಿದ ಪಂಡಿತ್ ರಾಹುಲ್ ಆಚಾರ್ಯ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು.
ಸೊಸೈಟಿ ಫಾರ್ಮದ ಪ್ರೊಮೋಷನ್ಸ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಂಡ್ ಕಲ್ಚರ್ ಅಮೊಂಗ್ಸಸ್ಟ್ ಯೂಥ್ ಆಶ್ರಯದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮ ನೆರೆದಿದ್ದ ಕಲಾಭಿಮಾನಿಗಳ ಮನ ಸೆಳೆಯಿತು.
ಡಿವೈನ್ ಡ್ಯಾನ್ಸರ್ ಎಂದೇ ಖ್ಯಾತರಾದ ರಾಹುಲ್ ಆಚಾರ್ಯ ಶಾಸ್ತ್ರೀಯವಾದ, ಶುದ್ಧವಾದ ನೈಜ ಕಲಾ ಪ್ರದರ್ಶನ ಹಾಗೂ ಅವರ ಪಾಂಡಿತ್ಯ ಮತ್ತು ಮೃದು ಮಾತು ನೆರೆದಿದ್ದ ಕಲಾರಸಿಕರಿಗೆ ರಸದೌತಣ ನೀಡಿತು. ಅವರೊಂದಿಗೆ ಸಹಕಲಾವಿದರಾಗಿ ಸಂಗೀತದಲ್ಲಿ ಸುಕಾಂತ ಕುರ್ಮಾರ್ ಕುಂಡ, ಮರ್ಧಲಾದಲ್ಲಿ ದಿಬಾಕರ್ ಪಾರಿದಾ, ವಯಲಿನ್ನಲ್ಲಿ ಪ್ರದೀಪ್ ಕುಮಾರ್ ಮಹಾರಣ ಮತ್ತು ಮಂಜೀರದಲ್ಲಿ ಸುಮುಖ ತಮಂಕರ್ ಸಹಕಾರ ನೀಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಉಪ ಪ್ರಾಂಶುಪಾಲ ಡಾ.ಎಂ ವಿಶ್ವನಾಥ ಪೈ ಮತ್ತು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ನೆರೆದಿದ್ದರು. ಅಂಕಿತಾ ರಾವ್ ಕಾರ್ಯಕ್ರಮ ನಿರೂಪಿಸಿ, ಅದಿತಿ ವಂದಿಸಿದರು.





