ಆನ್‌ವೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಜು.20: ನಗರದ ಕಡಿಯಾಳಿ ನಿವಾಸಿ 66 ವರ್ಷದ ಹಿರಿಯ ನಾಗರಿಕರೊಬ್ಬರು ಆನ್‌ಲೈನ್‌ನಲ್ಲಿ ಒಟ್ಟಾರೆಯಾಗಿ 5,11,882ರೂ.ಗಳ ವಂಚನೆಗೊಳಗಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಸ್ಮಾನ್ ಸಾಹೇಬ್ (66) ಎಂಬವರು ತನ್ನ ಎಸ್ಬಿ ಖಾತೆಯಿಂದ ಫ್ರೆಂಡ್‌ಶಿಪ್ ಕ್ಲಬ್ ಎಂಬ ಆನ್‌ಲೈನ್ ಕ್ಲಬ್‌ನ ಸದಸ್ಯತ್ವ ಪಡೆಯಲು ತಮ್ಮ ಖಾತೆಯಿಂದ, ಗೂಗಲ್ ಫೇ ಮೂಲಕ ವಿವಿಧ ಹಂತದಲ್ಲಿ ಹಣವನ್ನು ಕಳುಹಿಸಿದ್ದು, ಯಾರೋ ಸೈಬರ್ ವಂಚಕರು ಉಸ್ಮಾನ್ ಖಾತೆಯಿಂದ ಒಟ್ಟು 5 ಲಕ್ಷದ 11 ಸಾವಿರದ 882 ರೂ. ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




