ಹಣ ಹೂಡಿಕೆ ಹೆಸರಿನಲ್ಲಿ 11.50 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕೋಟ, ಆ.19: ಹಣ ಹೂಡಿಕೆ ಹೆಸರಿನಲ್ಲಿ 11.50ಲಕ್ಷ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರಪಾಡಿ ಗ್ರಾಮದ ಅರುಣಾ(33) ಎಂಬವರಿಗೆ ಅಪರಿಚಿತರು ಸಂಪರ್ಕಿಸಿ ಹಣ ಹೂಡಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ತಿಳಿಸಿದ್ದರು. ಅದನ್ನು ನಂಬಿದ ಅರುಣಾ 2024ರ ನ.19ರಿಂದ 2025ರ ಎ.28ರ ಮದ್ಯಾವಧಿಯಲ್ಲಿ ಹಂತಹಂತವಾಗಿ ಒಟ್ಟು 11,50,480ರೂ. ವನ್ನು ಆರೋಪಿಯ ಖಾತೆಗೆ ಹಾಕಿದ್ದರು. ಆದರೆ ಆರೋಪಿ ಹಣವನ್ನು ವಾಪಾಸ್ಸು ಹಿಂದುರುಗಿಸದೇ ವಂಚನೆ ಮಾಡಿರುವುದಾಗಿ ದೂರಲಾಗಿದೆ.
Next Story





