ಷೇರು ಹೆಸರಿನಲ್ಲಿ 13.11ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಶಂಕರನಾರಾಯಣ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದೆಂಬ ಜಾಹೀರಾತನ್ನು ನಂಬಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.
ವಿಶ್ವನಾಥ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡುವ ಕುರಿತ ಜಾಹೀರಾತನ್ನು ನಂಬಿ, ಆರೋಪಿಗಳು ತಿಳಿಸಿದ ಖಾತೆಗೆ ಒಟ್ಟು 13,11,258ರೂ. ಹಣವನ್ನು ವರ್ಗಾವಣೆ ಮಾಡಿ ದ್ದರು. ಆದರೆ ಆರೋಪಿಗಳು ಷೇರನ್ನು ಖರೀದಿಸಲು ಕಳುಹಿಸಿದ ಹಣವಾಗಲೀ ಲಾಭಾಂಶವಾಗಲೀ ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





