ಹಣ ಹೂಡಿಕೆ ಹೆಸರಿನಲ್ಲಿ 18.59 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಜ.23: ಟ್ರೆಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇರ್ಕಾಡಿ ಗ್ರಾಮದ ರವೀಂದ್ರ (31) ಎಂಬವರನ್ನು ಎಂಟು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿ 2004 ಎಂಬ ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದ್ದು, ಈ ಗ್ರೂಪ್‌ನಲ್ಲಿ ಟ್ರೇಡಿಂಗ್ ಅಕೌಂಟ್ ಕ್ರಿಯೆಟ್ ಮಾಡಿದಲ್ಲಿ ಹಣ ಗಳಿಸುವ ವಿಧಾನದ ಬಗ್ಗೆ ಹೇಳಿ ಕೊಡುವುದಾಗಿ ಮೆಸೇಜ್ ಕಳುಹಿಸಿಸುತ್ತಿದ್ದರು. ನಂತರ ರವೀಂದ್ರ ಅವರ ವೈಯಕ್ತಿಕ ಟೆಲಿಗ್ರಾಂ ಐಡಿಗೆ ಮೆಸೇಜ್ ಮಾಡಿ ಟ್ರೇಡಿಂಗ್ ಅಕೌಂಟ್ ಕ್ರಿಯೇಟ್ ಮಾಡುವಂತೆ ತಿಳಿದ್ದು, ಅದರಂತೆ ಅವರು ಅಕೌಂಟ್ ಕ್ರಿಯೆಟ್ ಮಾಡಿದ್ದರು.
ಟ್ರೇಡಿಂಗ್‌ನಲ್ಲಿ ಲಾಭಾಂಶ ಗಳಿಸುವ ಅಪರಿಚಿತ ವ್ಯಕ್ತಿ ಮಾತು ನಂಬಿದ ರವೀಂದ್ರ, ಅವರು ಹೇಳಿದ ವಿವಿಧ ಖಾತೆ ಗಳಿಗೆ ಒಟ್ಟು 18,59,500ರೂ. ಹಣವನ್ನು ವರ್ಗಾವಣೆ ಮಾಡಿದರು. ಆದರೆ ಆರೋಪಿಗಳು ಈವರೆಗೆ ರವೀಂದ್ರ ಹಾಕಿದ ಹಣವನ್ನಾಗಲಿ ಅಥವಾ ಲಾಭದ ಹಣವನ್ನಾಗಲಿ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.





