ಆನ್‌ಲೈನ್‌ನಲ್ಲಿ 6 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಉಡುಪಿ, ಜು.25: ಆನ್‌ಲೈನ್ ವಂಚನೆಗೆ ಮತ್ತೊಬ್ಬರು ಬಲೆಗೆ ಬಿದ್ದು ಮೇ 29ರಿಂದ ಜು.15ರ ನಡುವಿನ ಅವಧಿಯಲ್ಲಿ ಒಟ್ಟು 6.05 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಗೌರೀಶ್ ಎಂಬವರೇ ವಂಚನೆಗೊಳಗಾದವರು.
ಕಳೆದ ಮೇ ತಿಂಗಳಲ್ಲಿ ಯೂಟ್ಯೂಬ್‌ನ್ನು ನೋಡುತ್ತಿರುವಾಗ ಮನೆಯಲ್ಲಿದ್ದೇ 1000ರೂನಿಂದ 3000 ರೂ.ಸಂಪಾದಿಸಿ ಎಂಬ ಜಾಹಿರಾತು ನೋಡಿ, ಅದರ ಲಿಂಕ್ ಮೂಲಕ ಆನ್‌ಲೈನ್ ಮನಿ ಎಂಬ ಆ್ಯಪ್‌ಗೆ ಹೋಗಿ ಅಲ್ಲಿ ಅವರು ನೀಡಿದ ಟಾಸ್ಕ್‌ಗೆ ಹಂತ ಹಂತವಾಗಿ ಗೂಗಲ್ ಪೇ ಹಾಗೂ ಅಂತಾರಾಷ್ಟ್ರೀಯ ಟಾನ್ಸೆಷನ್ ಮೂಲಕ ಒಟ್ಟು 6 ಲಕ್ಷ ರೂಗಳನ್ನು ಅವರು ಹೇಳಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದರು.
ಆದರೆ ಗೌರೀಶ್ ಅವರ ಜಮಾ ಮಾಡಿದ ಹಣವಾಗಲೀ, ಅವರು ಹೇಳಿದ ಲಾಭಾಂಶವಾಗಲೀ ಬಾರದಿದ್ದಾಗ ಮೋಸ ಹೋಗಿರುವುದನ್ನು ತಿಳಿದು ಸೆನ್ ಅಪರಾಧ ಠಾಣೆಯಲ್ಲಿ ವಂಚನೆಯ ಪ್ರಕರಣ ದಾಖಲಿಸಿದ್ದಾರೆ.
Next Story





