ಅಲ್ಟಾಟೆಕ್ ಹೆಸರಿನಲ್ಲಿ 80 ಸಾವಿರ ರೂ. ಆನ್‌ಲೈನ್ ವಂಚನೆ: ದೂರು ದಾಖಲು

ಮಣಿಪಾಲ, ಫೆ.23: ಅಲ್ಟಾಟೆಕ್ ಕಂಪೆನಿ ಹೆಸರಿನಲ್ಲಿ ಇಂಜಿನಿಯರೊಬ್ಬ ರಿಗೆ ಸಾವಿರಾರು ರೂ. ಹಣ ಆನ್‌ಲೈನ್‌ನಲ್ಲಿ ವಂಚಿಸಿ ರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಷಾರ್ ಎಚ್.ಪಿ.(42) ಎಂಬವರು ಮಣಿಪಾಲ ಹೆರ್ಗಾ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಮನೆ ನಿರ್ಮಾಣ ಮಾಡು ತ್ತಿದ್ದು ಈ ಮನೆಯ ನಿರ್ಮಾಣಕ್ಕೆ ಕಿರಣ್ ಹಾಗೂ ಮಂಜುನಾಥ್ ಎಂಬ ಇಂಜಿನಿಯರ್ ಅವರಿಗೆ ವಹಿಸಿದ್ದರು. ಕಿರಣ್ ಕಾಂಕ್ರೀಟ್ ಮಾಡಲು ಆರ್‌ಎಂಸಿ ಸಪ್ಲಾಯರನ್ನು ಆನ್‌ಲೈನ್‌ನಲ್ಲಿ ಹುಡುಕುತ್ತಿದ್ದು, ಅಲ್ಲಿ ಸಿಕ್ಕಿದ ನಂಬರ್‌ಗೆ ಫೆ.21ರಂದು ಕರೆ ಮಾಡಿದರು.
ಅವರು ಅಲ್ಟ್ರಾಟೆಕ್ ಕಂಪನಿಯಿಂದ ಮಾತನಾಡುತ್ತಿರುವುದು ಎಂದು ಹೇಳಿ, ಸೈಟ್ ಪರಿಶೀಲನೆ ಮಾಡುವ ಮೊದಲು ಮುಂಗಡ 80000ರೂ. ನೀಡುವಂತೆ ತಿಳಿಸಿದರು. ಅದನ್ನು ನಂಬಿ ಕಿರಣ್ ಆರೋಪಿಗಳು ತಿಳಿಸಿದ ಖಾತೆಗೆ 80 ಸಾವಿರ ರೂ. ಹಣವನ್ನು ಹಾಕಿದ್ದರು. ಆದರೆ ಆರೋಪಿಗಳು ಅಲ್ಟಾಟೆಕ್ ಕಂಪನಿಯ ಹೆಸರಿನಲ್ಲಿ ಕಿರಣ್ ಅವರಿಗೆ ಮೋಸ ಮಾಡಿರುವುದು ತಿಳಿದುಬಂದಿದೆ.
Next Story




