ಸಿಸ್ಟಂ ಅಪ್ಡೇಟ್ ಸಂದೇಶ ಕಳುಹಿಸಿ ಆನ್ಲೈನ್ ವಂಚನೆ : ಪ್ರಕರಣ ದಾಖಲು

ಕುಂದಾಪುರ, ನ.16: ಮೊಬೈಲ್ ಸಿಸ್ಟಂ ಅಪ್ಡೇಟ್ ಸಂದೇಶ ಕಳುಹಿಸಿ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಕ್ಸನ್ ಡಿಸೋಜ(36) ಎಂಬವರು ಈ ಹಿಂದೆ ಕೇರಳದಲ್ಲಿ ಸಂಚಾರ ಉಲ್ಲಂಘನೆ ಮಾಡಿರುವುದರಿಂದ ದಂಡ ಕಟ್ಟಲು ನ.11ರಂದು ಮೊಬೈಲ್ ನಲ್ಲಿ ಕೇರಳ ಈ ಚಲನ್ ಆಪ್ ಸರ್ಚ್ ಮಾಡಿದ್ದರು. ನ.12ರಂದು ಜಾಕ್ಸನ್ ಡಿಸೋಜ ಮೊಬೈಲ್ನಲ್ಲಿ ಸಿಸ್ಟಂ ಅಪ್ ಡೇಟ್ ಎಂದು ತೋರಿಸಿದ್ದು ನಂತರ ಮೀನು ವಾಹನದ ಡ್ರೈವರ್ಗೆ 5000ರೂ. ಹಣವನ್ನು ಪೋನ್ ಪೇ ಮಾಡುವ ನೋಡಿದಾಗ ಖಾತೆಯಲ್ಲಿ ಹಣ ಇಲ್ಲ ಎಂಬುದಾಗಿ ತೋರಿಸಿತು.
ಬಳಿಕ ಜಾಕ್ಸನ್ ಡಿಸೋಜ ಬ್ಯಾಂಕ್ಗೆ ಹೋಗಿ ಎರಡು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಗಳಿಂದ ಒಟ್ಟು 3,41,042.18ರೂ. ಹಣವನ್ನು ಸೈಬರ್ ಅಪರಾಧಿಗಳು ಬೇರೆ ಖಾತೆಗೆ ವರ್ಗಾವಣೆ ಮಾಡಿ ಮೋಸ ಮಾಡಿರುವುದು ಕಂಡುಬಂದಿದೆ.
Next Story




