Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ನಾಗರಿಕ ಶಕ್ತಿಯಿಂದ ಮಾತ್ರ ಜಗತ್ತನ್ನು...

ನಾಗರಿಕ ಶಕ್ತಿಯಿಂದ ಮಾತ್ರ ಜಗತ್ತನ್ನು ಉಳಿಸಲು ಸಾಧ್ಯ : ಚಿಂತಕ ಶಿವಸುಂದರ್

ಉಡುಪಿ: ‘ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?’ ಪುಸ್ತಕ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ18 Nov 2023 10:42 PM IST
share
ನಾಗರಿಕ ಶಕ್ತಿಯಿಂದ ಮಾತ್ರ ಜಗತ್ತನ್ನು ಉಳಿಸಲು ಸಾಧ್ಯ : ಚಿಂತಕ ಶಿವಸುಂದರ್

ಉಡುಪಿ : ಇಸ್ರೇಲ್‌ನ ಅನ್ಯಾಯಕಾರಿ ಆಕ್ರಮಣದ ವಿರುದ್ಧ ಇಡೀ ಜಗತ್ತಿನಾದ್ಯಂತ ದಿಗ್ಭಂಧನದ ಬಹೃತ್ ಜಾಗತಿಕ ಚಳವಳಿ ನಡೆಯುತ್ತಿದೆ. ಇದುವೇ ನಮ್ಮ ಮುಂದೆ ಇರುವ ಏಕೈಕ ಆಶಾಕಿರಣ. ಇಂದು ಜಗತ್ತಿನ ಜನರ ಅಭಿಪ್ರಾಯವು ನ್ಯಾಯದ ಪರವಾಗಿ ವಾಲುತ್ತಿದೆ. ಭಾರತದಲ್ಲಿಯೂ ಜನ ನ್ಯಾಯದ ಪರ ಹೋರಾಟ ಕಟ್ಟದಿದ್ದರೆ ಬಲಪಂಥೀಯ ಗಟ್ಟಿಯಾಗಿ ಅದರ ಬಲಿಪಶುಗಳು ನಾವೆಲ್ಲ ಆಗಬೇಕಾಗುತ್ತದೆ. ನಾಗರಿಕ ಶಕ್ತಿ ಮಾತ್ರ ಈ ಜಗತ್ತನ್ನು ಉಳಿಸಲು ಸಾಧ್ಯ ಎಂದು ಚಿಂತಕ ಮತ್ತು ಲೇಖಕ ಶಿವಸುಂದರ್ ಅಭಿಪ್ರಾಯ ಪಟ್ಟಿದ್ದಾರೆ.

ಸಹಬಾಳ್ವೆ ಉಡುಪಿ ವತಿಯಿಂದ ಉಡುಪಿ ಡಾನ್ ಬಾಸ್ಕೋ ಹಾಲ್ ನಲ್ಲಿ ಶನಿವಾರ ಎ.ಎಸ್. ಪುತ್ತಿಗೆಯವರ 'ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವುದೇನು?' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.

ಇಸ್ರೇಲ್ ಮತ್ತು ಗಾಝಾದಲ್ಲಿ ನಡೆಯುತ್ತಿರುವುದು ಯುದ್ಧ ಅಲ್ಲ. ಬದಲು ಕಳೆದ 20 ವರ್ಷಗಳಿಂದ ಸರಿಯಾಗಿ ಆಹಾರ, ನೀರು, ಔಷಧಿ ಸಿಗದೆ ನಿತ್ರಾಣಗೊಂಡಿರುವ ಗಾಝಾದ 23 ಲಕ್ಷ ನಾಗರಿಕರ ಮೇಲೆ ನಡೆಯುತ್ತಿರುವ ಅನ್ಯಾಯಕಾರಿ ಆಕ್ರಮಣವಾಗಿದೆ. ಇವರ ಮೇಲೆ ಗಂಟೆಗೆ 45 ಬಾಂಬ್‌ಗಳನ್ನು ಸುರಿಸಿ, ಗಂಟೆಗೆ 12 ಕಟ್ಟಡಗಳು ನಾಶ ಮಾಡಲಾಗುತ್ತಿದೆ. ಪ್ರತಿ 10 ನಿಮಿಷಕ್ಕೆ ಒಂದು ಮಗು ಸಾಯುತ್ತಿವೆ. ಆದುದರಿಂದ ಈಗ ಅಲ್ಲಿ ನಡೆಯುತ್ತಿರುವುದು ಅಮಾನುಷ ಹಾಗೂ ಬರ್ಬರವಾದ ದಾಳಿಯಾಗಿದೆಂದು ಅವರು ತಿಳಿಸಿದರು.

ಇಸ್ರೇಲ್ ನಡೆಸುತ್ತಿರುವ ಅನ್ಯಾಯಕಾರಿ ಆಕ್ರಮಣಕ್ಕೆ ಭಾರತದಲ್ಲಿನ ಹಿಂದುತ್ವ ಧ್ವೇಷದ ರಾಜಕಾರಣ ಇನ್ನಷ್ಟು ಹೊತ್ತಿ ಬೆಳೆಯಲು ಅವಕಾಶ ಮಾಡಿಕೊಡುತ್ತಿದೆ. ಅನ್ಯಾಯಕಾರಿ ಅಕ್ರಮಣವನ್ನು ಭಾರತದ ಅಂತರ್ಗತದಲ್ಲಿ ನಡೆಯುತ್ತಿರುವ ಅನ್ಯಾಯ, ನರಸಂಹಾರದ ರಾಜಕಾರಣಕ್ಕೆ ಪೂರಕವಾಗಿ ಮತ್ತು ಪುಷ್ಠಿ ಕೊಡಲು ಬಳಸಿಕೊಳ್ಳಲಾಗುತ್ತಿದೆ. ಆದುದರಿಂದ ಭಾರತೀಯ ಸರಿಯಾಗಿ ನ್ಯಾಯದ ಪರವಾಗಿ ನಿಲುವು ತೆಗೆದುಕೊಳ್ಳದಿದ್ದರೆ ಅನ್ಯಾಯ ಗೆಲುವು ಇಡೀ ಜಗತ್ತಿನಲ್ಲಿ ವಿಜೃಂಭಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇಸ್ರೇಲ್‌ನಲ್ಲಿ ನಡೆಯುತ್ತಿರುವುದು ನ್ಯಾಯದ ಮೇಲಿನ ಅನ್ಯಾಯದ ಆಕ್ರಮಣವಾಗಿದೆ. ಭಾರತದಲ್ಲಿ ನ್ಯಾಯದ ಪ್ರಜ್ಞೆ ಉದ್ದೀಪನ ಆಗದಿದ್ದರೆ ಮುಂದೆ ಅನ್ಯಾಯದ ಜಾಗತೀಕರಣಕ್ಕೆ ನಾವೆಲ್ಲ ಬಲಿಯಾಗಬೇಕಾಗುತ್ತದೆ. ಪುರಾಣಗಳನ್ನು ಚರಿತ್ರೆಯನ್ನಾಗಿ ಮಾಡಿ, ಆ ಚರಿತ್ರೆಯನ್ನು ಮೂಲಕ ವರ್ತಮಾನ ಮತ್ತು ಭವಿಷ್ಯವನ್ನು ಕಟ್ಟುವ ಭಾರತದ ರಾಜಕಾರಣವೇ ಇಸ್ರೇಲ್‌ನಲ್ಲಿ ನಡೆಯುತ್ತಿರು ವುದು ಎಂದು ಅವರು ಹೇಳಿದರು.

ಇಸ್ರೇಲ್ ಆಕ್ರಮಣದ ಅಂತಿಮ ಗುರಿ, ಇಡೀ ಗಾಝಾಪಟ್ಟಿಯಲ್ಲಿರುವ 23 ಲಕ್ಷ ಜನರನ್ನು ಉತ್ತರದಿಂದ ದಕ್ಷಿಣಕ್ಕೆ ತಳ್ಳಿ, ಅಲ್ಲಿಂದ ಈಜಿಪ್ಟ್‌ಗೆ ದೂಡಿ ಬಿಡುವುದಾಗಿದೆ. ಆಗ ಇಡೀ ಗಾಝಾ ಇವರ ವಶಕ್ಕೆ ಪಡೆದುಕೊಳ್ಳಬಹುದು. ಆದುದರಿಂದ ಇಲ್ಲಿ ನಡೆಯುತ್ತಿರುವುದು ವಿಪತ್ತೇ ಹೊರತು ಯುದ್ಧ ಅಲ್ಲ. ಅದೊಂದು ವಿಪತ್ತು. 1948ಗಿಂತ ದೊಡ್ಡ ವಿಪತ್ತು ಈಗ ನಡೆಯುತ್ತಿದೆ. ಇದನ್ನು ಜಗತ್ತು ಮೌನವಾಗಿ ಸಹಿಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.

ಪುಸ್ತಕವನ್ನು ಬಿಡುಗಡೆಗೊಳಿಸಿದ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಇಸ್ರೇಲ್ ಯಹೂದಿಯರಿಗೆ ಬೈಬಲ್‌ನಲ್ಲಿ ಕೊಟ್ಟ ದೇಶ ಎಂದು ಹೇಳಲಾಗುತ್ತದೆ. ಆದರೆ ಬೈಬಲ್ ಒಂದು ಚರಿತ್ರೆಯ ಪುಸ್ತಕ ಅಲ್ಲ ಎಂಬುದು ಎಲ್ಲರು ತಿಳಿದುಕೊಳ್ಳಬೇಕಾಗಿದೆ. ಅದು ಒಂದು ವಿಶ್ವಾಸದ ಪುಸ್ತಕವಾಗಿದೆ. ಆದುದರಿಂದ ಬೈಬಲ್ ಆಧಾರದಲ್ಲಿ ಇಸ್ರೇಲ್‌ ಪರ ವಹಿಸಿಕೊಳ್ಳುವುದು ತಪ್ಪು ಎಂದು ಹೇಳಿದರು.

ವಿಮರ್ಶಕ ಮುಷ್ತಾಕ್ ಹೆನ್ನಾಬೈಲು ಪುಸ್ತಕ ಪರಿಚಯ ಮಾಡಿದರು. ಅಧ್ಯಕ್ಷತೆಯನ್ನು ಸಹಬಾಳ್ವೆ ಸಂಚಾಲಕ ಪ್ರೊ.ಕೆ.ಫಣಿರಾಜ್ ವಹಿಸಿದ್ದರು. ಸಹಬಾಳ್ವೆ ಜಿಲ್ಲಾ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ವಂದಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

ಇಸ್ರೇಲ್ ಜೊತೆ ಅನ್ಯಾಯದ ರಾಜಕಾರಣ

ಜಗತ್ತು ಒಂದು ಕಡೆ ರಷ್ಯಾ ದಾಳಿಯಿಂದ ಆಕ್ರಮಿತ ಉಕ್ರೇನ್ ಅನ್ಯಾಯಕ್ಕೆ ಒಳಗಾಗಿದೆ ಎಂದು ಆ ದೇಶಕ್ಕೆ ಸಶಸ್ತ್ರ ಹಾಗೂ ಹಣಕಾಸು ಸರಬರಾಜು ಮಾಡುತ್ತಿದೆ. ಆದರೆ ಇಲ್ಲಿ ಆಕ್ರಮಣ ಮಾಡುತ್ತಿರುವ ಇಸ್ರೇಲ್‌ಗೆ ಸಶಸ್ತ್ರ ಪೂರೈಕೆ ಮಾಡುತ್ತಿದೆ. ಇದರ ಹಿಂದೆ ಅನ್ಯಾಯದ ರಾಜಕಾರಣ ಅಡಗಿದೆ ಎಂದು ಶಿವಸುಂದರ್ ಆರೋಪಿಸಿದರು.

ಅಹಿಂಸಾ ಹೋರಾಟಗಳನ್ನು ದಮನ ಮಾಡುವ ಯಂತ್ರಗಳನ್ನು ಪೂರೈಕೆ ಮಾಡುತ್ತಿರುವ ಇಸ್ರೇಲ್ ಇಂದು ಎಲ್ಲ ಬಲಪಂಥೀಯ ದೇಶಗಳಿಗೆ ಆದರ್ಶ ವಾಗುತ್ತಿದೆ. ಅದಕ್ಕಾಗಿಯೇ 2003ರಲ್ಲಿ ಬಲಪಂಥೀಯ ಬಿಜೆಪಿ ಅಧಿಕಾರದಲ್ಲಿ ದ್ದಾಗ ಇಸ್ರೇಲ್ ಪ್ರಧಾನಿ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವುದು ಮತ್ತು ಮೋದಿ ಅಧಿಕಾರಕ್ಕೆ ಬಂದಾಗ ಭಾರತ ಮೊದಲ ಪ್ರಧಾನಿ ಇಸ್ರೇಲ್‌ಗೆ ಭೇಟಿ ನೀಡಿರುವುದು. ಎಲ್ಲ ಬಲಪಂಥೀಯ ದೇಶಗಳು ತಮ್ಮಲ್ಲಿನ ಭಿನ್ನಮತವನ್ನು ಹತ್ತಿಕ್ಕಲು ಇಸ್ರೇಲ್‌ನ್ನು ಆದರ್ಶವಾಗಿ ಇಟ್ಟುಕೊಂಡಿದೆ ಎಂದು ಅವರು ತಿಳಿಸಿದರು.

ಈ ಪುಸ್ತಕವನ್ನು ಮಾಧ್ಯಮ ಪ್ರಕಾಶನ ಪ್ರಕಟಿಸಿದೆ. ಪ್ರತಿಗಳಿಗಾಗಿ ಸಂಪರ್ಕಿಸಿ - 88676 78549











share
ವಾರ್ತಾಭಾರತಿ
ವಾರ್ತಾಭಾರತಿ
Next Story
X