ಮಡಗಾಂವ್ ಬಳಿ ಓವರ್ಬ್ರಿಡ್ಜ್ ಕಾಮಗಾರಿ: ಕೆಲವು ರೈಲುಗಳ ಸಂಚಾರ ವೇಳೆಯಲ್ಲಿ ವ್ಯತ್ಯಯ

ಸಾಂದರ್ಭಿಕ ಚಿತ್ರ (PTI)
ಉಡುಪಿ: ಮಡಗಾಂವ್ನ ರಾವನ್ಫಾಂಡದಲ್ಲಿ ರಸ್ತೆಗೆ ಓವರ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಗಿರ್ಡರ್ ಕಾಮಗಾರಿ ಎ.21ರಿಂದ 24ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಎ.22ರಂದು ಮಡಗಾಂವ್ ಜಂಕ್ಷನ್ ನಿಲ್ದಾಣದಲ್ಲಿ ಸುಮಾರು 20ನಿಮಿಷ ತಡೆ ಹಿಡಿಯಲಾಗುವುದು.
ಇಂದೋರ್ ಹಾಗೂ ತಿರುವನಂತಪುರಂ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಎ.22ರಂದು ಮಡಗಾಂವ್ ಜಂಕ್ಷನ್ನಲ್ಲಿ 35 ನಿಮಿಷ ತಡೆಹಿಡಿಯಲಾಗುವುದು.
ಎರ್ನಾಕುಲಂ ಜಂಕ್ಷನ್- ಓಖಾ ಎಕ್ಸ್ಪ್ರೆಸ್ ರೈಲಿನ ಎ.23ರ ಸಂಚಾರ ವನ್ನು ಬಾಲಿ ನಿಲ್ದಾಣದಲ್ಲಿ 20 ನಿಮಿಷ ವಿಳಂಬಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
Next Story




