ಅಧಿಕಭಾರ, ಸ್ಪೀಡ್‌ಗವರ್ನರ್: 21 ವಾಹನಗಳ ವಿರುದ್ಧ ಪ್ರಕರಣ

ಉಡುಪಿ, ಜ.30: ಅಧಿಕಭಾರ ಹಾಗೂ ಸ್ಪೀಡ್ ಗವರ್ನರ್ ಅಳವಡಿಸಿಕೆ ಸಂಬಂಧಿಸಿ ಮರಳು, ಕಲ್ಲು, ಮಣ್ಣು ಸಾಗಾಟದ ವಾಹನಗಳ ತಪಾಸಣೆ ಕಾರ್ಯ ಜಿಲ್ಲೆಯಾದ್ಯಂತ ಮುಂದುವರೆದಿದೆ.
ಉಡುಪಿ ಜಿಲ್ಲೆಯಲ್ಲಿ ಅಧಿಕಭಾರದ ವಾಹನ ಚಲಾವಣೆ, ಜಿಲ್ಲಾಡಳಿತದ ಆದೇಶದಂತೆ ಸ್ಪೀಡ್ ಗವರ್ನರ್ ಅಳವಡಿಕೆಯ ಬಗ್ಗೆ ಜಿಲ್ಲೆಯಾದ್ಯಂತ ಒಟ್ಟು 1665 ವಾಹನಗಳನ್ನು ಪರಿಶೀಲಿಸಲಾಗಿದ್ದು, ಇವುಗಳಲ್ಲಿ ಒಟ್ಟು 21 ವಾಹನಗಳ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಕೊಳ್ಳಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
Next Story





