ಪಡುಬಿದ್ರೆ | ಕಾರು ಢಿಕ್ಕಿ: ಪಾದಚಾರಿಗೆ ತೀವ್ರ ಗಾಯ

ಪಡುಬಿದ್ರೆ, ಆ.8: ಕಾರೊಂದು ಢಿಕ್ಕಿಯಾಗಿ ಪಾದಚಾರಿ ಗಂಭೀರ ಗಾಯಗೊಂಡ ಘಟನೆ ಉಚ್ಚಿಲದ ಬುಧಗಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಗುರುವಾರ ಸಂಜೆ ನಡೆದಿರುವುದು ವರದಿಯಾಗಿದೆ.
ಹಳೆಯಂಗಡಿ ನಿವಾಸಿ ಶಂಸುದ್ದೀನ್(55) ಗಾಯಗೊಂಡವರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಂಸುದ್ದೀನ್ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಉಡುಪಿ-ಮಂಗಳೂರು ಭಾಗದ ಹೆದ್ದಾರಿ ಏಕಮುಖ ರಸ್ತೆಯಲ್ಲಿ ಬಂದ ಪ್ರಭಾಕರ ಶೆಟ್ಟಿ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರಭಾಕರ ಶೆಟ್ಟಿ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





