ಪಡುಬಿದ್ರಿ | ಸ್ಕೂಟರ್ ಪಲ್ಟಿ; ಸವಾರ ಮೃತ್ಯು

ಸಾಂದರ್ಭಿಕ ಚಿತ್ರ
ಪಡುಬಿದ್ರಿ: ಸ್ಕೂಟರನ್ನು ನಿರ್ಲಕ್ಷದಿಂದ ಚಾಲನೆ ಮಾಡಿಕೊಂಡು ವೇಗವಾಗಿ ಬಂದ ಅದರ ಚಾಲಕ ನಿಯಂತ್ರಣ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ತಲೆಗೆ ತೀವ್ರ ತರಹದ ಗಾಯವಾಗಿ ಮೃತಪಟ್ಟ ಘಟನೆ ನಂದಿಕೂರು ಗ್ರಾಮದ ನಂದಿಕೂರು ಬಸ್ ನಿಲ್ದಾಣದ ಎದುರು ಶನಿವಾರ ರಾತ್ರಿ 10ಗಂಟೆ ಸುಮಾರಿಗೆ ನಡೆದಿದೆ.
ಮೃತ ಯುವಕನನ್ನು ಮೂಲ್ಕಿ ಕಾರ್ನಾಡು ಗ್ರಾಮ ಕೆ.ಎಸ್.ನಗರದ ನಿವಾಸಿ ಮಲ್ಲಿಕಾರ್ಜುನ ಆರ್.ಕೆ. ಎಂಬವರ ಪುತ್ರ ಕಿರಣ್ ಎಂದು ಗುರುತಿಸಲಾಗಿದೆ. ಕಿರಣ್ ಕಳೆದ ರಾತ್ರಿ ಸ್ಕೂಟರ್ನಲ್ಲಿ ಪಡುಬಿದ್ರಿ ಕಡೆಯಿಂದ ನಂದಿಕೂರು ಕಡೆಗೆ ಹೋಗುತಿದ್ದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




