ಪಡುಬಿದ್ರಿ | ಯುವಕನಿಗೆ 5 ಲಕ್ಷ ರೂ. ಆನ್‌ಲೈನ್ ವಂಚನೆ

ಪಡುಬಿದ್ರಿ, ನ.12: ಯುವಕನೋರ್ವನಿಗೆ ಆನ್‌ಲೈನ್ ನಲ್ಲಿ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂತೂರಿನ ಉತ್ತಮ್(24) ಎಂಬವರು ಸಾಮಾಜಿಕ ಜಾಲತಾಣದಲ್ಲಿ ಸ್ಟಾಕ್ ಮಾರ್ಕೇಟ್ ಬಗ್ಗೆ ಹುಡುಕುತ್ತಿರುವಾಗ ವಾಟ್ಸಪ್ ಗ್ರೂಪ್ ಲಿಂಕ್ ಇದ್ದು, ಅದಕ್ಕೆ ಸಂದೇಶ ಕಳುಹಿಸಿದ್ದರು. ನಂತರ ಸೆ.29ರಂದು ಉತ್ತಮ್ ಗೆ ಕರೆ ಮಾಡಿದ ವ್ಯಕ್ತಿ, ಲಿಂಕ್ ಅನ್ನು ಕಳುಹಿಸಿದ್ದನು. ಬಳಿಕ ಉತ್ತಮ್ ಆ್ಯಪ್ ಡೌನ್ಲೋಡ್ ಮಾಡಿ, ನ.6ರಂದು ಹಣ ಹೂಡಿಕೆ ಮಾಡಿದ್ದರು. ಬಳಿಕ ಹಂತ ಹಂತವಾಗಿ ಒಟ್ಟು 5,00,000 ರೂ. ಹೂಡಿಕೆ ಮಾಡಿದ್ದರು. ನಂತರ ಉಳಿದ 4,90,000ರೂ. ಹಣವನ್ನು ವಾಪಾಸು ತೆಗೆಯಲು ಹೋದಾಗ ವಂಚನೆ ಎಸಗಿರುವುದು ಕಂಡುಬಂದಿದೆ ಎಂದು ದೂರಲಾಗಿದೆ.
Next Story





