ಕಾರು ಢಿಕ್ಕಿ: ಪಾದಚಾರಿ ಮೃತ್ಯು

ಬೈಂದೂರು, ಜು.27: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಅತಿವೇಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಆಸ್ಪತ್ರೆಗೆ ಸಾಗಿರುವ ಮಾರ್ಗದಲ್ಲಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉಪ್ಪುಂದ ಗ್ರಾಮದ ಓಲಗಮಂಟಪದ ಬಳಿ ನಡೆದಿದೆ. ಮೃತರನ್ನು ಮಾಚ ಎಂದು ಗುರುತಿಸಲಾಗಿದೆ.
ರಸ್ತೆಯ ತೀರಾ ಎಡ ಭಾಗಕ್ಕೆ ಬಂದ ಕಾರು ರಸ್ತೆ ಬದಿಯ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದು ಅಲ್ಲೇ ಮುಂದೆ ಸ್ವಲ್ಪ ದೂರ ದಲ್ಲಿ ನಿಂತಿದ್ದ ಮಾಚರಿಗೆ ಡಿಕ್ಕಿ ಹೊಡೆದಾಗ ಅವರು ದೂರಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story




