ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಉಡುಪಿ, ಸೆ.28: ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ. ಮತ್ತು ಡಾ. ಅರುಣ್ ಜಿ. ಮಯ್ಯ ಅವರ ಸಹ-ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಡಾ. ಮೆಹೆವಿಶ್ ಮುಶೀರ್ ಶೇಖ್ ಅವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
‘ಸಾಫ್ಟ್ ಕಂಪ್ಯೂಟಿಂಗ್ ಟೆಕ್ನಿಕ್ ಫಾರ್ ಪ್ರೆಡಿಕ್ಷನ್ ಆಫ್ ಫುಟ್ ರಿಸ್ಕ್ ಕ್ಲಾಸಿಫಿಕೇಶನ್ ಫಾರ್ ಟೈಪ್-2 ಡಯಬಿಟಿಕ್ ವಿದ್ ಡಯಬಿಟಿಕ್ ಫುಟ್ ಸಿಂಡ್ರೋಮ್’ ಎಂಬ ವಿಷಯದ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಇವರು ಉಡುಪಿ ಇಂದ್ರಾಳಿಯ ರಮೀಝ್ ಅಹ್ಮದ್ ಅವರ ಪತ್ನಿ ಹಾಗೂ ಉಡುಪಿಯ ಮುಶೀರ್ ಶೇಖ್ ಮತ್ತು ಇಶ್ರತ್ ಶೇಖ್ ದಂಪತಿಯ ಪುತ್ರಿಯಾಗಿದ್ದಾರೆ.
Next Story




