ಚುಟುಕು ಕವಿ ಗಣೇಶ್ ವೈದ್ಯ ನಿಧನ

ಉಡುಪಿ, ಜ.24: ಚುಟುಕು ಕವಿ ಹಾಗೂ ದಿನಕರ ದೇಸಾಯಿ ಪ್ರಶಸ್ತಿ ವಿಜೇತ ಉಪ್ಪುಂದ ಗಣೇಶ್ ವೈದ್ಯ(53) ಜ.23ರಂದು ಹೃದಯಾಘಾತ ದಿಂದ ಉಡುಪಿಯಲ್ಲಿ ನಿಧನರಾದರು.
ಸಾಹಿತ್ಯ ಲೋಕದಲ್ಲಿ ತಮ್ಮ ವಿನೂತನ ಚುಟುಕು ಕವಿತೆಗಳ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಗಣೇಶ್ ವೈದ್ಯ, ಹಲವು ಪುಸ್ತಕಗಳನ್ನು ಪ್ರಕಟಿಸಿದ್ದರು. ಸರಳ ಪದಗಳಲ್ಲಿ ಆಳವಾದ ಅರ್ಥ ಹೇಳುವ ಅವರ ಶೈಲಿ ಅಪಾರ ಜನಪ್ರಿಯತೆ ಪಡೆದಿತ್ತು.
ಚೆಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಅನೇಕ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿ ಮಾರ್ಗ ದರ್ಶನ ನೀಡಿದ್ದರು. ದ್ವಾರಕ ಚೆಸ್ ಸ್ಕೂಲ್‌ನ ಸಂಸ್ಥಾಪಕರಾಗಿ, ಕುವೆಂಪು ಯೂನಿವರ್ಸಿಟಿಯ ಮಾಜಿ ಚೆಸ್ ಕೋಚ್ ಆಗಿಯೂ, ಜ್ಯೋತಿಷ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಹೆಸರನ್ನು ಮಾಡಿದ್ದರು. ಇವರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ-ಸಹೋದರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
Next Story





