ಗಂಗೊಳ್ಳಿ | ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಐವರ ಬಂಧನ

ಸಾಂದರ್ಭಿಕ ಚಿತ್ರ
ಗಂಗೊಳ್ಳಿ: ಆಲೂರು ಮಾವಿನಗುಳಿ ಎಂಬಲ್ಲಿ ನ.23ರಂದು ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಗಂಗೊಳ್ಳಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ದಿವಾಕರ(56), ಗಣೇಶ್(40), ಗಣೇಶ್(29), ಪ್ರಶಾಂತ್(37), ಎಚ್.ಬಾಬು(55) ಬಂಧಿತ ಆರೋಪಿಗಳು. ಜಯಶೀಲ ಶೆಟ್ಟಿ ಹಾಗೂ ಇತರರು ಪೊಲೀಸ್ ದಾಳಿ ವೇಳೆ ಸ್ಥಳದಿಂದ ಓಡಿ ಹೋಗಿದ್ದಾರೆ. 7 ಕೋಳಿ ಹುಂಜ, 5 ಕೋಳಿಬಾಳು ಹಾಗೂ 2400ರೂ. ನಗದು, ಏಳು ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





