ಉಡುಪಿ ದಸರಾದ ದಶಮ ವರ್ಷದ ಪೋಸ್ಟರ್ ಬಿಡುಗಡೆ

ಉಡುಪಿ, ಜು.23: ಉಡುಪಿ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿಯ ದಶಮ ವರ್ಷದ ಸಂಭ್ರಮದ ಉಡುಪಿ ದಸರಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ಗೀತಾ ಮಂದಿರದಲ್ಲಿ ಉಡುಪಿ ದಸರಾದ ಪೋಸ್ಟರ್‌ನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಬಿಡುಗಡೆ ಗೊಳಿಸಿದರು. ಸೆ.22ರಿಂದ ಅ2ರವರೆಗೆ ತಾರೀಖಿನವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು ಅ.3ರಂದು ಉಡುಪಿ ದಸರಾ ವಿಜೃಂಭಣೆಯ ಶೋಭಯಾತ್ರೆ ಜರಗಲಿದೆ ಎಂದು ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದರು
ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪರ್ಯಾಯ ಸಮಿತಿಯ ರಮೇಶ್ ಭಟ್,ಉಡುಪಿ ದಸರಾ ಸಮಿತಿಯ ಪ್ರಮುಖರಾದ ಮಟ್ಟು ಲಕ್ಷ್ಮೀ ನಾರಾಯಣ ರಾವ್, ರಾಧಾಕೃಷ್ಣ ಮಂಡನ್ ಜೀವಿ ಆಚಾರ್ಯ, ತಾರಾ ಯು.ಆಚಾರ್ಯ, ವೀಣಾ ಶೆಟ್ಟಿ, ಸುರೇಶ್ ಸೇರಿಗಾರ್, ಸತೀಶ್ ಕುಮಾರ್, ಸರೋಜ ಯಶವಂತ್, ಶೋಭಾ ಶೆಟ್ಟಿ, ಪ್ರದೀಪ್ ಕುಮಾರ್, ದೀಪಕ್, ಜಯರಾಮ್ ದೇವಾಡಿಗ, ಸುಕನ್ಯ ಶೇಖರ್, ಜಯರಾಮ್ ಜಿ,ಸುಜಾತ ದೇವಾಡಿಗ, ಪ್ರಭಾವತಿ ಅಲೆವೂರು, ತಾರಾ ಸತೀಶ್, ಭಾರತಿ ಶೆಟ್ಟಿ, ಜಯಲಕ್ಷ್ಮಿ ಅಮೀನ್, ದಾಮೋದರ್ ಭಟ್ ಶಾಂತ ಸೇರಿಗಾರ್, ವಿಗ್ರಹ ರಚನೆಕಾರ ಕುಬೇರ ಶಿವಮೊಗ್ಗ ಮೊದಲಾದವರು ಉಪಸ್ಥಿತರಿದ್ದರು







