Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ ಜಿಲ್ಲೆಯ ಹೊಟೇಲ್‌ಗಳ ಸಾಮೂಹಿಕ...

ಉಡುಪಿ ಜಿಲ್ಲೆಯ ಹೊಟೇಲ್‌ಗಳ ಸಾಮೂಹಿಕ ಬಂದ್‌ಗೆ ಹೆಚ್ಚಿದ ಒತ್ತಡ: ತಲ್ಲೂರು ಶಿವರಾಮ ಶೆಟ್ಟಿ

ವಾರ್ತಾಭಾರತಿವಾರ್ತಾಭಾರತಿ18 March 2026 8:54 PM IST
share
ಉಡುಪಿ ಜಿಲ್ಲೆಯ ಹೊಟೇಲ್‌ಗಳ ಸಾಮೂಹಿಕ ಬಂದ್‌ಗೆ ಹೆಚ್ಚಿದ ಒತ್ತಡ: ತಲ್ಲೂರು ಶಿವರಾಮ ಶೆಟ್ಟಿ
► ಹೊಟೇಲ್‌ಗಳಿಗೆ ಹೊಡೆತ ನೀಡಿದ ವಾಣಿಜ್ಯ ಅನಿಲ ಸಿಲಿಂಡರ್ ಅಭಾವ ► ಹೊಟೇಲ್ ಮಾಲಕರ ಮುಂದೆ ಹತ್ತಾರು ಸಮಸ್ಯೆ, ಆರ್ಥಿಕತೆ ಮೇಲೂ ಪ್ರಭಾವ

ಉಡುಪಿ/ಕುಂದಾಪುರ, ಮಾ.18: ಪಶ್ಚಿಮ ಏಷ್ಯಾ ದೇಶಗಳಲ್ಲಿ ನಿಲ್ಲದ ಯುದ್ಧದ ಭೀತಿ ಜಿಲ್ಲೆಯ ಹೊಟೇಲ್ ಮಾಲಕರಿಗೆ ಮಾರಕವಾಗಿ ಎರಗಿದೆ. ಅದೇ ರೀತಿ ಹೊಟೇಲ್‌ನ್ನೇ ನಂಬಿರುವ ಸಾವಿರಾರು ಗ್ರಾಹಕರೂ ಈಗ ಹೊಟೇಲ್ ಮುಚ್ಚುವ ಭೀತಿಯಲ್ಲಿ ಆತಂಕವನ್ನು ವ್ಯಕ್ತಪಡಿಸುತಿದ್ದಾರೆ. ಇದು ಜಿಲ್ಲೆಯ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಯುದ್ಧದ ಭೀಕರತೆಯ ನಡುವೆ ಕಳೆದ ಸೋಮವಾರದಿಂದ (ಮಾ.9) ಹೊಟೇಲ್‌ಗಳಿಗೆ ಪ್ರತಿದಿನ ವಿತರಣೆ ಯಾಗುತಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್ ಸಪ್ಲೈ ನಿಂತ ಬಳಿಕ ಇಂದಿನವರೆಗೂ ಪುನರಾರಂಭಗೊಂಡಿಲ್ಲ. ಜಿಲ್ಲಾಡಳಿತವಾಗಲೀ, ಸರಕಾರವಾಗಲೀ ಅನಿಲ ಸಿಲಿಂಡರ್ ಪುನರಾರಂಭಗೊಳ್ಳುವ ಬಗ್ಗೆ ಯಾವುದೇ ಖಚಿತ ಭರವಸೆಯನ್ನು ನೀಡುತ್ತಿಲ್ಲ. ಇದರ ಪರಿಣಾಮ ಜಿಲ್ಲೆಯಾದ್ಯಂತ ಪ್ರತಿದಿನವೆಂಬಂತೆ ಹತ್ತಾರು ಹೊಟೇಲ್‌ಗಳು ಬಾಗಿಲು ಹಾಕುವ ವರದಿಗಳು ಬರುತ್ತಿವೆ.

‘ಜಿಲ್ಲೆಯಲ್ಲಿ ಹೊಟೇಲ್‌ಗಳು ಮುಚ್ಚುತ್ತಿರುವ ಬಗ್ಗೆ ನಮಗೂ ಮಾಹಿತಿ ಗಳು ಬರುತ್ತಿವೆ. ಆದರೆ ಖಚಿತವಾಗಿ ಗೊತ್ತಿಲ್ಲ. ಅದೇ ರೀತಿ ಮುಚ್ಚುವುದಾದರೆ ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಸಂಘದ ಮೇಲೆ ಹೆಚ್ಚುತ್ತಿದೆ. ಒಮ್ಮೆ ಬಾಗಿಲು ಮುಚ್ಚಿದರೆ ಮತ್ತೆ ತೆರೆಯಲು ಹಲವು ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಸ್ವಲ್ಪ ದಿನ ಕಾದುನೋಡೋಣ ಎಂದು ಎಲ್ಲರಿಗೂ ಸಮಾಧಾನ, ಧೈರ್ಯ ಹೇಳುತಿದ್ದೇವೆ.’ ಎಂದು ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ‘ವಾರ್ತಾಭಾರತಿ’ಯೊಂದಿಗೆ ಇಂದು ಸಂಜೆ ಮಾತನಾಡುತ್ತಾ ನುಡಿದರು.

ಸಂಘದ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ವಿವರಿಸಿದರೂ ಅವರಿಂದ ಖಚಿತ ಭರವಸೆ ಸಿಕ್ಕಿಲ್ಲ. ನೀವು ಅನಿಲಕ್ಕೆ ಪರ್ಯಾಯ ಉರುವಲು ಬಳಸಲು ಆದ್ಯತೆ ನೀಡಿ ಎಂದಿದ್ದಾರೆ. ಕಟ್ಟಿಗೆಯೂ ಬೇಕಾದಂತೆ ಸಿಗುತ್ತಿಲ್ಲ. ಬೇರೆ ಪರ್ಯಾಯಗಳೂ ಸುಲಭದಲ್ಲಿ ಕೈಗಟಕುತ್ತಿಲ್ಲ. ಅಸಹಾಯಕರಾದವರು ಈಗಾಗಲೇ ಬಾಗಿಲು ಮುಚ್ಚಿದ್ದಾರೆ ಎಂದರು.

ಹೊಟೇಲ್ ಬಂದ್ ಮಾಡುವುದು ಸಹ ಹೇಳಿದಷ್ಟು ಸುಲಭವಲ್ಲ. ಒಮ್ಮೆ ಹೊಟೇಲ್ ಮುಚ್ಚಿದರೆ, ಸಿಬ್ಬಂದಿಗಳನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯೂ ಎದುರಾಗುತ್ತದೆ. ಈಗಾಗಲೇ ತಿಂಡಿ, ಊಟದ ವೈವಿಧ್ಯತೆಯಲ್ಲಿ ಸಾಕಷ್ಟು ಕಡಿತ ಮಾಡಲಾಗಿದೆ. ದೋಸೆಯನ್ನು ನಿಲ್ಲಿಸಿಬಿಟ್ಟಿದ್ದೇವೆ. ದೊಡ್ಡ ದೊಡ್ಡ ಹೊಟೇಲ್‌ಗಳು ಇದರ ಬಿಸಿ ಅನುಭವಿಸುತ್ತಿವೆ ಎಂದು ತಲ್ಲೂರು ಶಿವರಾಮ ಶೆಟ್ಟಿ ನುಡಿದರು.

ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲೂ ವಾಣಿಜ್ಯ ಬಳಕೆ ಅಡುಗೆ ಅನಿಲ ಅಭಾವದಿಂದಾಗಿ ಹೋಟೆಲ್ ಉದ್ಯಮಕ್ಕೆ ಬಾರೀ ಹೊಡೆತ ಬಿದ್ದಿದೆ. ಗ್ಯಾಸ್ ಮೂಲಕವೇ ತಿಂಡಿ-ತಿನಿಸುಗಳನ್ನು ತಯಾರಿಸುತ್ತಿದ್ದ ಸಣ್ಣ-ಪುಟ್ಟ ಹೋಟೆಲ್, ಕ್ಯಾಂಟಿನ್‌ಗಳು ಒಂದಷ್ಟು ಮುಚ್ಚಿದ ಬಗ್ಗೆ ವರದಿಯಾಗಿದೆ. ಇನ್ನು ಕೆಲ ಪ್ರಸಿದ್ದ ಸಸ್ಯಾಹಾರಿ ಹೋಟೆಲ್‌ ಗಳಲ್ಲಿ ಮೆನು ಬದಲಾವಣೆ ಮಾಡಲಾಗಿದ್ದು ದೋಸೆ ಮೊದಲಾದ ತಿಂಡಿ-ತಿನಿಸುಗಳು ಗ್ರಾಹಕರಿಗೆ ಅಲಭ್ಯವಾಗಿದೆ.

ಪ್ರಸಿದ್ಧ ಕ್ಷೇತ್ರ ಕೊಲ್ಲೂರಿನಲ್ಲಿರುವ ಹೋಟೆಲ್ ಮಹಾಲಕ್ಷ್ಮೀಯಲ್ಲಿ ಎಲ್ಪಿಜಿ ಅಭಾವ ಕಂಡುಬಂದಿದ್ದು ಹಿಂಬಂದಿಯ ಜಾಗದಲ್ಲಿ ಸೌದೆ ಒಲೆ ನಿರ್ಮಿಸಲಾಗಿದೆ. ಎಲ್ಲಾ ಸಮಯದಲ್ಲಿ ದೋಸೆ ಮೊದಲಾದ ಕೆಲ ಆಹಾರಖಾದ್ಯ ದೊರಕು ತ್ತಿಲ್ಲ. ಆದಷ್ಟು ಗ್ರಾಹಕರಿಗೆ ಸೇವೆ ನೀಡಲು ಬದ್ಧರಾಗಿದ್ದೇವೆ. ಬೆಂಕಿ ರಹಿತವಾಗಿ ತಯಾರಿಸಬಹುದಾದ ಆಹಾರ ಖಾದ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸೀಸನ್ ಸಮಯದಲ್ಲಿ ಹೀಗಾಗಿದ್ದು ಹೋಟೆಲ್ ಕೊಠಡಿ ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರು ಎಲ್ಪಿಜಿ ಲಭ್ಯತೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಮಹಾಲಕ್ಷ್ಮೀ ಹೋಟೆಲ್ ಜನರಲ್ ಮ್ಯಾನೇಜರ್ ಮಧುಸೂಧನ್ ’ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಕುಂದಾಪುರದ ಪ್ರಸಿದ್ಧ ಪಾರಿಜಾತ ಹೋಟೆಲ್‌ನಲ್ಲಿ ಕೆಲವು ದಿನಗಳಿಂದ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಲಾ ಗುತ್ತಿದ್ದು, ಗ್ರಾಹಕರಿಗೆ ಅಗತ್ಯ ತಿನಿಸುಗಳನ್ನು ಪೂರೈಸಲಾಗುತ್ತಿದೆ. ಕೋಟದ ಪ್ರಸಿದ್ಧ ಲತಾ ಹೋಟೆಲ್‌ನಲ್ಲಿ ಬೆಳಿಗ್ಗೆ ಮೆನು ಬದಲಾವಣೆಯಾಗಿದ್ದು ಇಲ್ಲಿನ ಸ್ಪೆಷಲ್ ದೋಸೆಗಳು ಸಿಗೋದಿಲ್ಲ.

ಇನ್ನು ಅನೇಕ ಮಾಂಸಾಹಾರಿ ಹೋಟೆಲ್‌ಗಳನ್ನು ಸಹ ಮುಚ್ಚಲಾಗಿದೆ. ಕೆಲವು ಬಾರ್-ರೆಸ್ಟೋರೆಂಟ್‌ಗಳಲ್ಲಿ ಸೌದೆ ಒಲೆ ಬಳಕೆ ಮಾಡುತ್ತಿದ್ದು ಹಲವೆಡೆ ಮೀನು ಖಾದ್ಯಗಳು ದೊರೆಯುತ್ತಿಲ್ಲ, ಬದಲಾಗಿ ಬಿರಿಯಾನಿ ಮೊದಲಾದ ಖಾದ್ಯಗಳಷ್ಟೇ ಲಭಿಸುತ್ತಿದೆ. ಬಹಳಷ್ಟು ಕಡೆ ಬಾಯಿ ರುಚಿಗೆ ತಕ್ಕ ಸಸ್ಯಹಾರಿ, ಮಾಂಸಹಾರಿ ಖಾದ್ಯಗಳು ಭೋಜನ ಪ್ರಿಯರಿಗೆ ಸಿಗುತ್ತಿಲ್ಲ ಎಂದು ಎರಡು ಹೊತ್ತಿನ ಊಟಕ್ಕೆ ಹೊಟೇಲ್‌ನ್ನೇ ಆಶ್ರಯಿಸಿರುವ ಕೆಲವು ಗ್ರಾಹಕರು ದೂರುತಿದ್ದಾರೆ.

ಕುಂದಾಪುರ ನಗರದಲ್ಲಿ ಸಂಜೆ ಮೇಲೆ ಕಾರ್ಯಾಚರಿಸುತ್ತಿದ್ದ ಬಹುತೇಕ ಚೈನೀಸ್ ಪಾಸ್ಟ್‌ಫುಡ್ (ಮೊಬೈಲ್ ಕ್ಯಾಂಟಿನ್)ಗಳನ್ನು ಮುಚ್ಚಲಾಗಿದೆ. ಇದರಿಂದ ವರ್ತಕರಿಗೆ ಮಾತ್ರವಲ್ಲದೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದ ವಲಸೆ ಕಾರ್ಮಿಕರು ಸಹಿತ ಚೈನೀಸ್ ಖಾದ್ಯ ಪ್ರಿಯ ಸಾರ್ವಜನಿಕ ರಿಗೆ ಕಸಿವಿಸಿಯಾಗಿದೆ. ಗೂಡಂಗಡಿಗಳು, ಆಮ್ಲೇಟ್, ಮಿರ್ಚಿ, ಬೋಂಡಾ, ಪಾನಿಪೂರಿ, ಗೋಬಿ ಮಂಚೂರಿ ಮೊದಲಾದ ಖಾದ್ಯ ತಯಾರಕರು ಅಚ್ಚುಕಟ್ಟಿನಲ್ಲಿ ತಿಂಡಿ ತಯಾರಿಸಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ಬೈಂದೂರಿನಲ್ಲಿ ಸಮಸ್ಯೆ ಅಷ್ಟೊಂದು ಕಾಣುತ್ತಿಲ್ಲ. ಇಲ್ಲಿನ ಗ್ರಾಮೀಣ ಭಾಗದ ಹೊಟೇಲ್‌ಗಳಲ್ಲಿ ಇರುವ ಅಡುಗೆ ಅನಿಲ ಬಳಸುವುದು ಒಂದೆಡೆಯಾದರೆ ಹಿಂದೆ ಉಪಯೋಗಿಸಿ ಬಳಿಕ ಮೂಲೆ ಸೇರಿದ್ದ ಸೌದೆ ಒಲೆಗಳ ಉಪಯೋಗ ಮತ್ತೆ ಆರಂಭವಾಗಿದೆ. ಅನ್ನ ಹಾಗೂ ಹೆಚ್ಚು ಬೇಯಿಸಬೇಕಾದ ಅಡುಗೆ ಪದಾರ್ಥಗಳನ್ನು ಸೌದೆ ಒಲೆಯಲ್ಲಿ ಮಾಡಿ ಉಳಿದ ಆಹಾರ ತಯಾರಿಕೆಗೆ ಗ್ಯಾಸ್ ಒಲೆ ಬಳಸಲಾಗುತ್ತಿದೆ. ಸಣ್ಣ ಹೋಟೆಲ್ ವ್ಯವಹಾರಸ್ಥರು ತಮ್ಮ ಮನೆ ಸಿಲಿಂಡರ್‌ನ್ನು ಬಳಸುವುದು ಕಂಡುಬಂದಿದೆ. ಹೀಗಾಗಿ ಸದ್ಯಕ್ಕೆ ವ್ಯವಹಾರ ಸ್ಥಗಿತಗೊಳಿಸುವ ಪರಿಸ್ಥಿತಿ ಬಂದಿಲ್ಲ ಎನ್ನಲಾಗಿದೆ.

"ಈಗಾಗಲೇ ಕುಂದಾಪುರದಲ್ಲಿರುವ 2 ಹೋಟೆಲ್ ಪೈಕಿ ಮಾಂಸಹಾರಿ ಹೋಟೆಲ್ ಮುಚ್ಚಿದ್ದೇವೆ. ಸಸ್ಯಾಹಾರಿ ಹೋಟೆಲ್‌ನಲ್ಲಿ ಮಿತ ಆಹಾರ ಮಾತ್ರವೇ ಸಿದ್ಧಪಡಿಸಿ ನೀಡಲಾಗುತ್ತಿದೆ. ಕೊಲ್ಲೂರಿನ ಹೋಟೆಲ್‌ನಲ್ಲಿ ನಿರ್ದಿಷ್ಟ ಆಹಾರ ಖಾದ್ಯಗಳನ್ನು ಕೆಲ ದಿನಗಳಿಂದ ಸೌದೆ ಒಲೆಯಲ್ಲಿ ತಯಾರಿಸಲಾಗುತ್ತಿದೆ. ಅನಿಲ ಸಮಸ್ಯೆ ಹೀಗೆಯೇ ಮುಂದುವರಿದರೆ ವ್ಯವಹಾರಕ್ಕೆ ಬಾರೀ ಹೊಡೆತ ಉಂಟಾಗ ಲಿದೆ. ಹೋಟೆಲ್ ಮುಚ್ಚುವುದು ದೊಡ್ಡ ವಿಚಾರವಲ್ಲ. ಒಂದೆಡೆ ಸಂಸ್ಥೆಯಿಂದ ಗ್ರಾಹಕರು ದೂರಾಗುತ್ತಾರೆ. ಮತ್ತೊಂದೆಡೆ ಉದ್ಯೋಗ ನೀಡದಿದ್ದರೆ ಸಿಬ್ಬಂದಿ-ನೌಕರರು ತೆರಳಿದಲ್ಲಿ ವಾಪಾಸ್ ಕರೆತರುವುದು ಮತ್ತೊಂದು ಸವಾಲು".

-ವಿಕ್ರಮ್ ಜಿ.ಡಿ., ಆಡಳಿತ ನಿರ್ದೇಶಕರು, ಮಹಾಲಕ್ಷ್ಮೀ ಗ್ರೂಫ್ ಆಫ್ ಹೋಟೆಲ್ಸ್ ಕೊಲ್ಲೂರು ಮತ್ತು ಕುಂದಾಪುರ.

‘ಇನ್ನು ಒಂದೆರಡು ದಿನ ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲೆಯಲ್ಲಿ ಮತ್ತೆ 25-30ವರ್ಷ ಹಿಂದಿನ ಸ್ಥಿತಿಗೆ ಮರಳಬೇಕಾಗುತ್ತದೆ. ಬೆಳಗ್ಗೆ ತಿಂಡಿಗಳನ್ನು ತಯಾರಿಸಿ ಶೋಕೇಸ್‌ನಲ್ಲಿಟ್ಟು ಗ್ರಾಹಕರು ಬಂದಂತೆ ಅಲ್ಲಿನ ತಿಂಡಿಯನ್ನು ತೆಗೆದು ನೀಡಬೇಕಾಗುತ್ತದೆ. ಬಿಸಿಬಿಸಿ ತಿಂಡಿ ತಿನ್ನುವ ಆಸೆಗೆ ಗ್ರಾಹಕರು ಎಳ್ಳುನೀರು ಬಿಡಬೇಕಾಗುತ್ತದೆ.’

-ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷರು.

Tags

PressureincreasingmassbandhhotelsUdupiTallur Shivarama Shetty
share
ವಾರ್ತಾಭಾರತಿ
ವಾರ್ತಾಭಾರತಿ
Next Story
X