ವಾರ್ಷಿಕ ದತ್ತಿನಿಧಿ ಬಹುಮಾನ ವಿತರಣಾ ಕಾರ್ಯಕ್ರಮ

ಉಡುಪಿ: ಕರಾವಳಿ ಲೇಖಕಿಯರ ವಾಚಕಿಯರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಾರ್ಷಿಕ ದತ್ತಿನಿಧಿ ಬಹುಮಾನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಸಂಘದ ಸಭಾಂಗಣದಲ್ಲಿ ಜರಗಿತು.
ಯಶೋಧಾ ಜೆನ್ನಿಸ್ಮತಿ ಸಂಚಯ ಹಿರಿಯಡ್ಕ ಪ್ರಾಯೋಜಿತ ಸಣ್ಣ ಕಥಾ ಸಂಕಲನ ಸ್ಪರ್ಧೆಯ ವಿಜೇತರಾದ ಗೀತಾ ಕುಂದಾಪುರ(ಕೃತಿ- ಪಾಂಚಾಲಿಯಾಗಲಾರೆ), ಸಂದೀಪ ಸಾಹಿತ್ಯ ಆತ್ರಾಡಿ ಇವರಿಂದ ಪ್ರಾಯೋಜಿತ ನಾಟಕ ರಚನಾ ಹಸ್ತಪ್ರತಿ ಸ್ಪರ್ಧೆಯಲ್ಲಿ ವಿಜೇತರಾದ ಅಕ್ಷತಾರಾಜ್ ಪೆರ್ಲ(ಕೃತಿ- ರಾಜೀ ಪ್ರಸಂಗ ಸಾಮಾಜಿಕ ನಾಟಕ) ಅವರಿಗೆ ಬಹುಮಾನ ವಿತರಿಸಲಾಯಿತು.
ಅದೇ ರೀತಿ ಉದಯೋನ್ಮುಖ ಕತೆಗಾರ್ತಿಗಳಾದ ಶೋಭಿತಾ ಉಡುಪಿ ಹಾಗೂ ದೀಪ್ತಿ ಮಂಗಳೂರು ಅವರಿಗೆ ಪ್ರೋತ್ಸಾಹಕ ಬಹುಮಾನ ನೀಡ ಲಾಯಿತು. ಸಂಘದ ಅಧ್ಯಕ್ಷೇ ಶಕುಂತಳಾ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ದತ್ತಿನಿಧಿ ಪ್ರಯೋಜಕರಾದ ಕೆ.ನಾರಾಯಣ ಜೆನ್ನಿ, ಇಂದಿರಾ ಹಾಲಂಬಿ ಶುಭಾ ಹಾರೈಸಿದರು. ವಿದ್ಯಾ ಗಣೇಶ್ ವಂದಿಸಿದರು.
Next Story





