Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿ ರೈಲು ನಿಲ್ದಾಣದಲ್ಲಿ ಶೀಘ್ರ ಪಾಡ್...

ಉಡುಪಿ ರೈಲು ನಿಲ್ದಾಣದಲ್ಲಿ ಶೀಘ್ರ ಪಾಡ್ ಹೊಟೇಲ್, ಎಕ್ಸಿಕ್ಯೂಟಿವ್ ಲಾಂಜ್ ಸೌಲಭ್ಯ: ಸಂತೋಷ್‌ ಕುಮಾರ್ ಝಾ

ವಾರ್ತಾಭಾರತಿವಾರ್ತಾಭಾರತಿ12 Sept 2023 8:52 PM IST
share
ಉಡುಪಿ ರೈಲು ನಿಲ್ದಾಣದಲ್ಲಿ ಶೀಘ್ರ ಪಾಡ್ ಹೊಟೇಲ್, ಎಕ್ಸಿಕ್ಯೂಟಿವ್ ಲಾಂಜ್ ಸೌಲಭ್ಯ: ಸಂತೋಷ್‌ ಕುಮಾರ್ ಝಾ

ಉಡುಪಿ, ಸೆ.12: ಕೊಂಕಣ ರೈಲು ಮಾರ್ಗದ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರ್ವರೀತಿಯ ಅತ್ಯಾಧುನಿಕ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಶೀಘ್ರವೇ ಪಾಡ್ ಹೊಟೇಲ್ ಹಾಗೂ ವಿಮಾನ ನಿಲ್ದಾಣಗಳಲ್ಲಿರುವಂತೆ ಎಕ್ಸಿಕ್ಯೂಟಿವ್ ಲಾಂಝ್‌ಗಳನ್ನು ನಿರ್ಮಿಸಲಾಗುವುದು ಎಂದು ಕೊಂಕಣ ರೈಲ್ವೆಯ ನಿರ್ದೇಶಕ (ಆಪರೇಷನ್) ಸಂತೋಷ್‌ ಕುಮಾರ್ ಝಾ ಹೇಳಿದ್ದಾರೆ.

ಕೊಂಕಣ ರೈಲ್ವೆಯ ವತಿಯಿಂದ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡ ಸಂಪೂರ್ಣ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ವಿಶ್ರಾಂತಿ ಕೊಠಡಿಯಲ್ಲಿ 20 ಡಾರ್ಮಿಟ್ರಿ ಹಾಗೂ ಎರಡು ಬೆಡ್‌ಗಳ ಸುಸಜ್ಜಿತ ಕೊಠಡಿಗಳಿವೆ.

ಸದ್ಯ ಮುಂಬೈ ಸೆಂಟ್ರಲ್, ಚೆನ್ನೈ ಮುಂತಾದ ಪ್ರಮುಖ ನಗರಗಳ ರೈಲ್ವೆ ನಿಲ್ದಾಣಗಳಲ್ಲಿ ಪಾಡ್ ಹೊಟೇಲ್‌ಗಳಿವೆ. ಕೊಂಕಣ ರೈಲ್ವೆ ನಿಲ್ದಾಣ ಗಳಲ್ಲಿ ಇದು ಮೊತ್ತಮೊದಲ ಪಾಡ್ ಹೊಟೇಲ್ ಆಗಿರಲಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಪ್ರಯೋಜನವಾಗಲಿದೆ ಎಂದು ಝಾ ನುಡಿದರು.

ಮೂರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿದು ನಿರ್ಮಾಣ ಪ್ರಾರಂಭಗೊಳ್ಳಲಿದೆ. ನಿಲ್ದಾಣದ ಮೊದಲ ಮಹಡಿಯಲ್ಲಿ 3000 ಚದರಡಿ ವಿಸ್ತೀರ್ಣದಲ್ಲಿ ಇದು ನಿರ್ಮಾಣಗೊಳ್ಳಲಿದೆ. ಇಲ್ಲಿ 6ಗಂಟೆ, 12ಗಂಟೆ, 18ಗಂಟೆ, 24 ಗಂಟೆಗಳ ಕಾಲ ಉಳಿದುಕೊಳ್ಳಲು ಅವಕಾಶವಿರುತ್ತದೆ. ಇದರಲ್ಲಿ ಕನಿಷ್ಠ ದರ 300ರಿಂದ 400ರೂ. (6ಗಂಟೆಗೆ) ಆಗಿರಲಿದೆ ಎಂದರು.

ಉಡುಪಿಯ ಪಾಡ್ ಹೊಟೇಲ್‌ನಲ್ಲಿ 40 ರಿಂದ 60 ಪಾಡ್ (ಮಲಗಬಹುದಾದ ಗೂಡು) ಇರುತ್ತದೆ. ದಿನದ ತುರ್ತು ಕಾರ್ಯಕ್ಕೆ ಆಗಮಿಸುವ ಪ್ರಯಾಣಿಕರು ರೈಲು ನಿಲ್ದಾಣದಲ್ಲೇ ವಾಸ್ತವ್ಯವಿದ್ದು ಅಲ್ಲಿಂದಲೇ ಮರಳಲು ಅವಕಾಶವಿರುತ್ತದೆ. ಒಟ್ಟಾರೆ ಯೋಜನೆಗೆ 35ರಿಂದ 40 ಲಕ್ಷ ರೂ.ವೆಚ್ಚವಾಗಲಿದೆ ಎಂದು ಸಂತೋಷ್‌ ಕುಮಾರ್ ಝಾ ನುಡಿದರು.

ಎಕ್ಸಿಕ್ಯೂಟಿವ್ ಲಾಂಜ್: ಇದರೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಕಾಣಲು ಸಿಗುವ ಎಕ್ಸಿಕ್ಯೂಟಿವ್ ಲಾಂಜ್‌ನ್ನು ಉಡುಪಿ ರೈಲು ನಿಲ್ದಾಣದಲ್ಲೂ ನಿರ್ಮಿಸಲಾಗುತ್ತದೆ. ಕೊಂಕಣ ರೈಲು ಮಾರ್ಗದಲ್ಲಿ ಸದ್ಯ ಮಡಗಾಂವ್‌ನಲ್ಲಿ ಮಾತ್ರ ಈ ಸೌಲಭ್ಯವಿದೆ ಎಂದು ಝಾ ತಿಳಿಸಿದರು.

ಉಡುಪಿ ಕೆಆರ್‌ಸಿಎಲ್‌ನ ಪ್ರಮುಖ ನಿಲ್ದಾಣವಾಗಿರುವುದರಿಂದ ಇಲ್ಲೂ ಎಕ್ಸಿಕ್ಯೂಟಿವ್ ಲಾಂಜ್ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದ ಅವರು, ಇಲ್ಲಿ ಪ್ರಯಾಣಿಕರಿಗೆ ಸುಖಾಸೀನ ವ್ಯವಸ್ಥೆಯಿದ್ದು, ಸೋಫಾ, ಟಿವಿ, ಮಸಾಜ್ ಪಾರ್ಲರ್, ವೈಫೈ ಇತ್ಯಾದಿ ಸೌಲಭ್ಯಗಳು ದೊರಕಲಿವೆ. ಈ ಯೋಜನೆಗೂ ಸುಮಾರು 40 ಲಕ್ಷ ರೂ. ವೆಚ್ಚದ ಅಂದಾಜು ಮಾಡಲಾಗಿದೆ ಎಂದರು.

ವಂದೇಭಾರತ್ ರೈಲು: ಸದ್ಯ ಕೆಆರ್‌ಸಿಎಲ್ ಮಾರ್ಗದಲ್ಲಿ ಮಡಗಾಂವ್ ಹಾಗೂ ಮುಂಬೈ ನಡುವೆ ಮಾತ್ರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸುತಿದ್ದು, ಭವಿಷ್ಯದಲ್ಲಿ ಮುಂಬೈ- ಮಂಗಳೂರು ನಡುವೆ ವಂದೇಭಾರತ್ ರೈಲು ಸಂಚಾರ ಪ್ರಾರಂಭಗೊಂಡರೆ ಉಡುಪಿಗೆ ಅನುಕೂಲ ವಾಗಲಿದೆ ಎಂದರು.

ಕೊಂಕಣ ರೈಲ್ವೆಯಲ್ಲಿ ಸದ್ಯ ರೋಹಾ ಮತ್ತು ವೀರ್ ನಡುವೆ ಸುಮಾರು 47ಕಿ.ಮೀ. ಮಾರ್ಗ ಮಾತ್ರ ದ್ವಿಪಥಗೊಂಡಿದ್ದು, ಉಳಿದಂತೆ ಭಾರೀ ವೆಚ್ಚದ ಕಾರಣಕ್ಕಾಗಿ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಸಂಪೂರ್ಣ ಕೊಂಕಣ ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿದ್ದು, ಸದ್ಯ ಶೇ.80ರಿಂದ 90ರಷ್ಟು ರೈಲುಗಳು ಈ ಮಾರ್ಗದಲ್ಲಿ ವಿದ್ಯುತ್ ಇಂಜಿನ್‌ನಲ್ಲಿ ಓಡಾಟ ನಡೆಸುತ್ತಿವೆ ಎಂದು ಸಂತೋಷ್‌ಕುಮಾರ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಂಕಣ ರೈಲ್ವೆಯ ಚೀಫ್ ಕಮರ್ಷಿಯಲ್ ಮ್ಯಾನೇಜರ್ ಎಲ್.ಕೆ.ವರ್ಮಾ, ಕೊಂಕಣ ರೈಲ್ವೆಯ ಕಾರವಾರ ಪ್ರಾದೇಶಿಕ ಮ್ಯಾನೇಜರ್ ಬಿ.ಬಿ.ನಿಕ್ಕಂ, ಡೆಪ್ಯೂಟಿ ಕಮರ್ಷಿಯಲ್ ಮ್ಯಾನೇಜರ್ ಆರ್.ಡಿ.ಗೋಲಬ್, ಮಂಗಳೂರು ಕೊಂಕಣ ರೈಲ್ವೆಯ ಸೀನಿಯರ್ ಆರ್‌ಟಿಎಂ ವಿನಯಕುಮಾರ್ ಹಾಗೂ ಪಿಆರ್‌ಓ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಉಡುಪಿ, ತೋಕೂರಿನಲ್ಲಿ ಗೋದಾಮು, ಶೆಡ್

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಮಂಡಳಿಯೊಂದಿಗೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಸದ್ಯ ನಿಗಮದ ಮುಂದಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲು ಕೊಂಕಣ ರೈಲ್ವೆ ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಸದ್ಯ ಹಲವು ಯೋಜನೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತವಾಗಿದೆ ಎಂದು ಸಂತೋಷ ಕುಮಾರ್ ಝಾ ನುಡಿದರು.

ಈ ನಿಟ್ಟಿನಲ್ಲಿ 10 ಪ್ರಮುಖ ನಿಲ್ದಾಣಗಳಲ್ಲಿ ಬೃಹತ್ ಗೋದಾಮುಗಳ ನಿರ್ಮಾಣ ನಡೆಯುತ್ತಿದೆ. ಉಡುಪಿಯ ಗೋದಾಮು, ಶೆಡ್ ನಿರ್ಮಾಣ ಡಿಸೆಂಬರ್‌ನಲ್ಲಿ ಪೂರ್ಣವಾದರೆ, ತೋಕೂರಿನಲ್ಲಿ ಮುಂದಿನ ಫೆಬ್ರವರಿಗೆ ಪೂರ್ಣವಾಗಲಿದೆ ಎಂದರು. ಇಂದ್ರಾಳಿ ರೈಲ್ವೆ ನಿಲ್ದಾಣದ ಸುಂದರೀಕರಣ ಹಾಗೂ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಖಾಸಗಿಯವರು ಹಾಗೂ ದಾನಿಗಳು ಕೈಜೋಡಿಸುವಂತೆ ಅವರು ಮನವಿ ಮಾಡಿದರು.




share
ವಾರ್ತಾಭಾರತಿ
ವಾರ್ತಾಭಾರತಿ
Next Story
X