ತೋಕೂರು- ಜೋಕಟ್ಟೆ ನಡುವೆ ರೈಲ್ವೆ ಹಳಿ ದ್ವಿಪಥ ಕಾಮಗಾರಿ: ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಸಾಂದರ್ಭಿಕ ಚಿತ್ರ
ಉಡುಪಿ, ನ.11: ದಕ್ಷಿಣ ರೈಲ್ವೆಯು ತೋಕೂರು ಹಾಗೂ ಜೋಕಟ್ಟೆ ನಡುವೆ ರೈಲು ಹಳಿ ದ್ವಿಪಥ ಕಾಮಗಾರಿಯನ್ನು ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ನ.12ರಿಂದ 23ರವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ನ.14ರಂದು ರೈಲು ನಂ.16595 ಕೆಎಸ್ಆರ್ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲಿನ ಸಂಚಾರದಲ್ಲಿ 80 ನಿಮಿಷ ವಿಳಂಬವಾಗಲಿದೆ. ಅದೇ ರೀತಿ ಲೋಕಮಾನ್ಯ ತಿಲಕ್-ತಿರುವನಂತಪುರಂ ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣ 20 ನಿಮಿಷ ಹಾಗೂ ತಿರುವನಂತಪುರ ಉತ್ತರ- ಬಾವ್ನಗರ ಎಕ್ಸ್ಪ್ರೆಸ್ ರೈಲಿನ ಪ್ರಯಾಣ 15 ನಿಮಿಷ ವಿಳಂಬವಾಗಲಿದೆ.
ನ.17ರಂದು ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್ಪ್ರೆಸ್ ರೈಲಿನ ಪ್ರಯಾಣ 20 ನಿಮಿಷ ವಿಳಂಬವಾಗಲಿದೆ. ನ.18ರಂದು ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್ಪ್ರೆಸ್ ನ ಸಂಚಾರ 150 ನಿಮಿಷ ವಿಳಂಬವಾಗಲಿದೆ. ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವಿನ ಪ್ಯಾಸಂಜರ್ ರೈಲಿನ ಪ್ರಯಾಣ 20 ನಿಮಿಷ ವಿಳಂಬವಾಗಲಿದೆ.
ನ.18ರಂದು ಲೋಕಮಾನ್ಯ ತಿಲಕ್- ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನ (17ರಂದು ಹೊರಡುವ) ಪ್ರಯಾಮ 20 ನಿಮಿಷ ವಿಳಂಬವಾಗಲಿದೆ. ನ.19ರಂದು ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್ಪ್ರೆಸ್ ರೈಲಿನ 18ರ ಪ್ರಯಾಣ 30 ನಿಮಿಷ ವಿಳಂಬವಾಗಲಿದೆ.
ನ.23ರಂದು ಮುಂಬಯಿ ಸಿಎಸ್ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲಿನ ನ.22ರ ಸಂಚಾರವನ್ನು ಸುರತ್ಕಲ್ ನಲ್ಲೆ ಕೊನೆಗೊಳಿಸಲಾಗುವುದು. ಸುರತ್ಕಲ್- ಮಂಗಳೂರು ಜಂಕ್ಷನ್ ನಡುವಿನ ಪ್ರಯಾಣ ರದ್ದಾಗಲಿದೆ. 23ರಂದು ಈ ರೈಲಿನ ಮರು ಪ್ರಯಾಣವನ್ನು ಸುರತ್ಕಲ್ ನಿಂದ ಪ್ರಾರಂಭಿಸಲಾಗುವುದು.
ನ.23ರಂದು ಮುರ್ಡೇಶ್ವರ- ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಪ್ರಯಾಣ 120 ನಿಮಿಷ ವಿಳಂಬವಾಗಲಿದೆ. ಇದರೊಂದಿಗೆ ಉತ್ತರ ಹಾಗೂ ದಕ್ಷಿಣ ರಾಜ್ಯಗಳಿಗೆ ಸಂಚರಿಸುವ ಹಲವು ರೈಲುಗಳ ಪ್ರಯಾಣವೂ ವಿಳಂಬಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.







