Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ನಂದಳಿಕೆ ಗೋಳಿಕಟ್ಟೆ ಶಾಸನದ ಮರು ಅಧ್ಯಯನ

ನಂದಳಿಕೆ ಗೋಳಿಕಟ್ಟೆ ಶಾಸನದ ಮರು ಅಧ್ಯಯನ

ವಾರ್ತಾಭಾರತಿವಾರ್ತಾಭಾರತಿ20 Oct 2023 9:08 PM IST
share
ನಂದಳಿಕೆ ಗೋಳಿಕಟ್ಟೆ ಶಾಸನದ ಮರು ಅಧ್ಯಯನ

ಉಡುಪಿ, ಅ.20: ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಗೋಳಿಕಟ್ಟೆಯ ಶಾಸನವನ್ನು ಶಿರ್ವದ ಎಂ.ಎಸ್.ಆರ್.ಎಸ್ ಕಾಲೇಜಿನ ಪುರಾತತ್ತ್ವ ವಿದ್ಯಾರ್ಥಿಗಳು ತಮ್ಮ ಪುರಾತತ್ತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಮಾರ್ಗದರ್ಶನದಲ್ಲಿ ಮರು ಅಧ್ಯಯನಕ್ಕೆ ಒಳಪಡಿಸಿದ್ದು ಶಾಸನದ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದರು.

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ವರ್ತುಲಾಕಾರ ದಲ್ಲಿದ್ದು ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಕೆತ್ತನೆಯನ್ನು ನೋಡಬಹುದು. 20 ನೇ ಶತಮಾನದ 8 ಸಾಲಿನ ಕನ್ನಡ ಲಿಪಿಯನ್ನು ಒಳಗೊಂಡ ಈ ಶಾಸನವು 167 ಸೆಂ.ಮೀ ಉದ್ದ ಮತ್ತು 88 ಸೆಂ.ಮೀ ಸುತ್ತಳತೆಯನ್ನು ಹೊಂದಿದೆ.

‘1905ನೆ ಮಾಂಣ ಒಟ್ಟು ಅಂತಯ್ಯ ಶೆಟ್ರು’ ಎಂಬ ಉಲ್ಲೇಖವನ್ನು ಹೊಂದಿರುವ ಈ ಶಾಸನದಲ್ಲಿ ಮಾಂಣ ಒಟ್ಟು ಎಂಬ ಪ್ರದೇಶದ ಉಲ್ಲೇಖ ವಿದ್ದು ಪ್ರಸ್ತುತ ಈ ಪ್ರದೇಶವು ಮಾನೊಟ್ಟು ಎಂದು ಕರೆಯಲ್ಪಡುತ್ತಿದೆ. ಶಾಸನ ದೊರೆತ ಸ್ಥಳದಿಂದ ಇದು ಸುಮಾರು ಅರ್ಧ ಕಿ.ಮೀ ದೂರದಲ್ಲಿದೆ.

ಈ ಶಾಸನವನ್ನು ಈ ಮೊದಲು ಅಧ್ಯಯನ ಮಾಡಿದ ವಿದ್ವಾಂಸರು ‘ಮಾಂಣ ಒಟ್ಟು’ ಇರುವುದನ್ನು ಮರಣ ಮತ್ತು ಬೆಣಿಯ ಎಂದು, ’ಅಂತಯ್ಯ’ ಇರುವುದನ್ನು ಅಂಕಯ್ಯ ಎಂದು ಓದಿ, ಇದನ್ನು ‘ಅಂಕಯ್ಯ ಶೆಟ್ಟಿಯವರ ಮರಣ ಶಾಸನ’ವೆಂದು ಹೇಳಿದ್ದರು.

ಆದರೆ ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಶಾಸನವಿರುವ ಜಾಗದಲ್ಲಿ ದೊಡ್ಡ ಗೋಳಿಯ ಮರವಿದ್ದು, ಇದಕ್ಕೆ ಇಲ್ಲಿನ ಪ್ರಸಿದ್ಧ ವ್ಯಕ್ತಿಯಾದ ಅಂತಯ್ಯ ಶೆಟ್ರು ಕಟ್ಟೆಯನ್ನು ಕಟ್ಟಿಸಿದರು ಎಂಬುದನ್ನು ಸ್ಥಳೀಯರು ಈಗಲೂ ಹೇಳುತ್ತಾರೆ. ಪ್ರಸ್ತುತ ಗೋಳಿ ಮರದ ಸುತ್ತಲೂ ಈ ಕಟ್ಟೆಯ ಕುರುಹುಗಳನ್ನು ಕಾಣಬಹುದು.

ಹೀಗಾಗಿ ಈ ಶಾಸನವು ಅಂತಯ್ಯ ಶೆಟ್ರ ಮರಣ ಶಾಸನವಾಗಿರದೆ ಗೋಳಿಮರಕ್ಕೆ ಕಟ್ಟೆಯನ್ನು ಕಟ್ಟಿಸಿದ ಸ್ಮರಣಾರ್ಥ ಕವಾಗಿ ಅವರ ಹೆಸರಿನಲ್ಲಿ ಹಾಕಿಸಿರುವ ಶಾಸನವಾಗಿದೆ ಎಂದು ಶಾಸನದ ಮರು ಅಧ್ಯಯನದಲ್ಲಿ ತಿಳಿದುಬಂದಿದೆ.

ಕೇಂಜ - ಕನ್ಯಾನದ ವೀರಗಲ್ಲಿನ ಮರು ಅಧ್ಯಯನ

ಎಂಎಸ್‌ಆರ್‌ಎಸ್ ಕಾಲೇಜಿನ ಬಿ.ಎ ವಿದ್ಯಾರ್ಥಿಗಳು ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮಾರ್ಗದರ್ಶನದಲ್ಲಿ ಕಾಪು ತಾಲೂಕಿನ ಪಿಲಾರು ಗ್ರಾಮದ ಕನ್ಯಾನ ಮೇಲ್ಮನೆ ಪ್ರೇಮನಾಥ ಶೆಟ್ಟಿ ಅವರ ಅಬೆಕಾರು ಗದ್ದೆಯಲ್ಲಿರುವ ಎರಡು ಶಾಸನೋಕ್ತ ವೀರಗಲ್ಲುಗಳನ್ನು ಮರು ಅಧ್ಯಯನಕ್ಕೆ ಒಳಪಡಿಸಿತ್ತು.

ಈ ಶಾಸನೋಕ್ತ ವೀರಗಲ್ಲನ್ನು ಕಣ ಶಿಲೆಯಲ್ಲಿ ಕೆತ್ತಲಾಗಿದ್ದು, 180 ಸೆಂ.ಮೀ ಉದ್ದ ಹಾಗೂ 58 ಸೆಂ.ಮೀ ಅಗಲವಿದೆ. ವೀರಗಲ್ಲಿನ ಮುಂಭಾಗ ದಲ್ಲಿ ಮೂರು ಪಟ್ಟಿಕೆಗಳಿದ್ದು, ಕೆಳಗಿನ ಪಟ್ಟಿಕೆಯಲ್ಲಿ ಗಜ ಮತ್ತು ಅಶ್ವ ದೊಂದಿಗೆ ವೀರರು ಹೋರಾ ಡುವ ದೃಶ್ಯ, ಎರಡನೆಯ ಪಟ್ಟಿಕೆಯಲ್ಲಿ ವೇಳಾವೇಳಿಯಾಗಿ ಕುಳಿತ ವೀರನ ಕೆತ್ತನೆಯಿದ್ದು, ಈತನ ಮುಂಭಾಗದಲ್ಲಿ ಸ್ತ್ರೀ ಹಾಗೂ ಹಿಂಭಾಗದಲ್ಲಿ ಸೇವಕರು ತತ್ರ (ಕೊಡೆ)ವನ್ನು ಹಿಡಿದಿರುವಂತೆ ಕೆತ್ತಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಶಿವಲಿಂಗ, ನಂದಿ, ಕೈ ಮುಗಿದಿರುವ ವೀರ, ಸ್ತ್ರೀ-ಪುರುಷರ ಹಾಗೂ ಶಿವಲಿಂಗದ ಮೇಲ್ಭಾಗದಲ್ಲಿ ಇರ್ವರು ಗಂಧರ್ವರನ್ನು ಕೆತ್ತಲಾಗಿದೆ.

ವೀರಗಲ್ಲಿನ ಹಿಂಭಾಗದಲ್ಲಿ 9 ಸಾಲಿನ 11ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ ಶಾಸನವನ್ನು ಕೊರೆಯಲಾಗಿದೆ. ಈ ಮೊದಲು ಶಾಸನೋಕ್ತ ವೀರಗಲ್ಲನ್ನು ಅಧ್ಯಯನ ಮಾಡಿದ ವಿದ್ವಾಂಸರು ಇದನ್ನು ಹೊಯ್ಸಳ ವಿಷ್ಣುವರ್ಧನನ ಕಾಲದ್ದೆಂದು ಹೇಳಿದ್ದಾರೆ.

ಆದರೆ ಈ ಶಾಸನೋಕ್ತ ವೀರಗಲ್ಲು ಕಲ್ಯಾಣ ಚಾಲುಕ್ಯ 6ನೇ ವಿಕ್ರಮಾದಿತ್ಯ ಬಿರುದನ್ನು ನೇರವಾಗಿ ಉಲ್ಲೇಖಿಸುವುದಲ್ಲದೆ ತನಕ ಎಂಬ ವ್ಯಕ್ತಿಯು ವೇಳೆವಾಳಿಯಾಗಿದರ ಬಗ್ಗೆ ತಿಳಿಸುತ್ತದೆ. ತನಕ ಎಂಬ ವ್ಯಕ್ತಿಯು ರಾಜನ ಆಪ್ತನಾಗಿದ್ದು, ಯುದ್ಧ ದಲ್ಲಿ ವೀರಾವೇಶದಿಂದ ಹೋರಾಡಿ ವೀರಸ್ವರ್ಗವನ್ನು ಹೊಂದಿದ ನೆನಪಿಗಾಗಿ ಈ ವೇಳೆವಾಳಿ ಶಾಸನವನ್ನು ಕುನೆ ಹೊತ್ರೆಯ ಬಳಿಯ ಮಾಕು ಎವತನ ಮಗ ನಾಂಕನು ನಿಲ್ಲಿಸಿದ ಎಂಬುದನ್ನು ಶಾಸನವು ಉಲ್ಲೇಖಿಸುತ್ತದೆ.

ಇಲ್ಲಿಯೇ ತುಂಡಾಗಿರುವ ಇನ್ನೊಂದು ಶಾಸನೋಕ್ತ ವೀರಗಲ್ಲು ಇದ್ದು, ಕಣ (ಗ್ರಾನೈಟ್) ಶಿಲೆಯಲ್ಲಿ ಕೆತ್ತಲಾಗಿದೆ. ಈ ವೀರಗಲ್ಲಿನ ಮುಂಭಾಗದಲ್ಲಿ ಉಬ್ಬುಚಿತ್ರಗಳಿದ್ದು, ಎರಡು ಪಟ್ಟಿಕೆಯಲ್ಲಿ ಶಾಸನವನ್ನು ಕೊರೆಯಲಾಗಿದೆ. ಹಿಂಭಾಗದಲ್ಲಿಯೂ ಕಲ್ಯಾಣ ಚಾಲುಕ್ಯ ದೊರೆ 6ನೇ ವಿಕ್ರಮಾದಿತ್ಯನ ಬಿರುದನ್ನು ಹೊಂದಿರುವ ನಾಲ್ಕು ಸಾಲಿನ ಶಾಸನವನ್ನು ಕೊರೆಯಲಾಗಿದೆ.

ಈ ಎರಡು ಶಾಸನೋಕ್ತ ವೀರಗಲ್ಲುಗಳು ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಗೆ ಸೇರಿರದೆ ಕಲ್ಯಾಣ ಚಾಲುಕ್ಯ ದೊರೆ 6ನೇ ವಿಕ್ರಮಾದಿತ್ಯನ ಕಾಲ ಮತ್ತು ಆಳ್ವಿಕೆಗೆ ಸೇರುತ್ತದೆ ಎಂಬುದು ಮರು ಅಧ್ಯಯನದಿಂದ ದೃಢಪಟ್ಟಿದೆ ಎಂದು ಉಪನ್ಯಾಸಕ ಶ್ರುತೇಶ್ ಆಚಾರ್ಯ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X